ತಿರುವನಂತಪುರಂ: ಕೇರಳದಲ್ಲಿ ಕುಟುಂಬ ರಾಜಕಾರಣವನ್ನು ದೂಷಿಸಿದಾಗಲೆಲ್ಲ ಕೇರಳೀಯರು ಹೆಚ್ಚು ಸಿಟ್ಟು ಮಾಡಿಕೊಳ್ಳುತ್ತಾರೆ. ಉಮ್ಮನ್ ಚಾಂಡಿ ಸಂಪುಟದಲ್ಲಿ ಆರು ಮಂದಿ ಸಚಿವರು ಮಾಜಿ ಶಾಸಕರ ಪುತ್ರರಾಗಿದ್ದರು.
ತಮಾಷೆಯೆಂದರೆ ಮಕ್ಕಳು ಚುನಾವಣೆಯಲ್ಲೂ ಹಿರಿಮೆ ಕಂಡಿದ್ದಾರೆ.
ಕೆ ಕರುಣಾಕರನ್ ಮತ್ತು ಕೆ ಮುರಳೀಧರನ್ ಒಂದೇ ಚುನಾವಣೆಯಲ್ಲಿ ಸೋತ ತಂದೆ ಮತ್ತು ಮಗ. ಎರಡು ಚುನಾವಣೆಗಳಲ್ಲಿ ಒಟ್ಟಿಗೆ ಸ್ಪರ್ಧಿಸಿದ್ದರವರು. 1996 ಮತ್ತು 1998ರ ಲೋಕಸಭೆ ಚುನಾವಣೆಯಲ್ಲಿ ಜೊತೆಜೊತೆಗೇ ಸ್ಪರ್ಧಿಸಿದ್ದರು. 1996ರಲ್ಲಿ ಮುರಳಿ ಕೋಝಿಕ್ಕೋಡ್ ಸಂಸದ ವೀರೇಂದ್ರಕುಮಾರ್ ವಿರುದ್ಧ ಸೋತರೆ, ವಿವಿ ರಾಘವನ್ ತ್ರಿಶೂರ್ ನಲ್ಲಿ ಕರುಣಾಕರನ್ ಅವರನ್ನು ಸೋಲಿಸಿದ್ದರು. 1998ರಲ್ಲಿ ಇಬ್ಬರೂ ಕ್ಷೇತ್ರ ಬದಲಾಯಿಸಿದರು. ತಿರುವನಂತಪುರದಲ್ಲಿ ಕರುಣಾಕರನ್ ಗೆದ್ದರು. ಸ್ವತಃ ವಿವಿ ರಾಘವನ್ ತ್ರಿಶೂರ್ ನಲ್ಲಿ ಮುರಳೀಧರನ್ ಅವರನ್ನು ಸೋಲಿಸಿದರು. ಅಪ್ಪ-ಮಗನನ್ನು ಸೋಲಿಸಿದವನ ಹೆಸರೂ ರಾಘವನ್ ಅವರÀ ಪಾಲಾಯಿತು.
ಮುರಳೀಧರನ್ ಅವರು ತಂದೆಯೊಂದಿಗೆ ಮಾತ್ರವಲ್ಲದೆ ಸಹೋದರಿಯೊಂದಿಗೆ ಸ್ಪರ್ಧಿಸಿ ಸೋತ ನಾಯಕನೂ ಹೌದು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ನೇಮಂನಿಂದ ಸ್ಪರ್ಧಿಸಿದ್ದ ಮುರಳಿ ಮೂರನೇ ಸ್ಥಾನ ಪಡೆದಿದ್ದರು. ಪದ್ಮಜಾ ತ್ರಿಶೂರ್ ನಲ್ಲಿ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟರು.
2016ರ ವಿಧಾನಸಭಾ ಚುನಾವಣೆಯಲ್ಲಿ ಸಹೋದರಿ ಮತ್ತು ಸಹೋದರರು ಸ್ಪರ್ಧಿಸಿದ್ದರು. ವಟ್ಟಿಯೂರ್ಕಾವಿನಲ್ಲಿ ಕೆ ಮುರಳೀಧರನ್ ಮತ್ತು ತ್ರಿಶೂರಿನಲ್ಲಿ ಪದ್ಮಜಾ ವೇಣುಗೋಪಾಲ್. ಮುರಳಿ ಗೆದ್ದರು. ಪದ್ಮಜಾ ಸೋತರು.
ತಂದೆ ಮತ್ತು ಮಗ ಆರ್ ಬಾಲಕೃಷ್ಣ ಪಿಳ್ಳೈ ಮತ್ತು ಕೆಬಿ ಗಣೇಶಕುಮಾರ್ ಒಂದೇ ಚುನಾವಣೆಯಲ್ಲಿ ಗೆದ್ದಿದ್ದಾರೆ. 2001 ರ ವಿಧಾನಸಭಾ ಚುನಾವಣೆಯಲ್ಲಿ, ಆರ್ ಬಾಲಕೃಷ್ಣ ಪಿಳ್ಳೈ ಕೊಟ್ಟಾರಕ್ಕರದಿಂದ ಮತ್ತು ಕೆಬಿ ಗಣೇಶ್ ಕುಮಾರ್ ಪತ್ತನಾಪುರಂನಿಂದ ಆಯ್ಕೆಯಾದರು. ತಂದೆ ಶಾಸಕ, ಮಗ ಮಂತ್ರಿ.ಯಾದರು. ಕಾರಣ, ಪ್ರಕರಣವೊಂದರÀಲ್ಲಿ ಶಿಕ್ಷೆಗೆ ಗುರಿಯಾಗಿರುವ ಬಾಲಕೃಷ್ಣ ಪಿಳ್ಳೈ ಅವರನ್ನು ಸಚಿವರನ್ನಾಗಿ ಮಾಡಲು ಸಾಧ್ಯವಿಲ್ಲ ಎಂದು ಎ.ಕೆ.ಆಂಟನಿ ಪಟ್ಟು ಹಿಡಿದಿದ್ದರು. ಬಾಲಕೃಷ್ಣ ಪಿಳ್ಳೆ ಪ್ರಕರಣ ಮುಕ್ತರಾದಾಗ, ಅವರು ತಮ್ಮ ಮಗನಿಂದ ಮಂತ್ರಿಪದವಿಯನ್ನು ಹಿಂಪಡೆದು ಅಚ್ಚರಿ ಮೂಡಿಸಿದ್ದರು.