ಗೋದ್ರಾ: ದೇಶದಲ್ಲಿ ಯಾವುದೇ ಸ್ಟಾರ್ಟ್‌ಅಪ್‌ಗಳಿಲ್ಲ. ಇದ್ದರೂ ಅದು ವಿದೇಶಿ ಸಂಸ್ಥೆಗಳ ನಿಯಂತ್ರಣದಲ್ಲಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಿಳಿಸಿದರು.
ಗೋದ್ರಾ: ದೇಶದಲ್ಲಿ ಯಾವುದೇ ಸ್ಟಾರ್ಟ್‌ಅಪ್‌ಗಳಿಲ್ಲ. ಇದ್ದರೂ ಅದು ವಿದೇಶಿ ಸಂಸ್ಥೆಗಳ ನಿಯಂತ್ರಣದಲ್ಲಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಿಳಿಸಿದರು.
ಭಾರತ್ ಜೋಡೋ ನ್ಯಾಯ ಯಾತ್ರೆಯ ಭಾಗವಾಗಿ ಗೋದ್ರಾದಲ್ಲಿ ಮಾತನಾಡಿದ ರಾಹುಲ್, ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರದ 'ಸ್ಟಾರ್ಟ್‌ಅಪ್ ಇಂಡಿಯ' ಪರಿಕಲ್ಪನೆಯನ್ನು ಟೀಕಿಸಿದರು.
'ನಾವು ಸ್ಟಾರ್ಟ್‌ಅಪ್ ವಲಯಕ್ಕೆ ₹5000 ಕೋಟಿ ಅನುದಾನ ನೀಡುತ್ತೇವೆ. ಇದರಿಂದ ಬಡ ರೈತರ ಮಕ್ಕಳು ಮತ್ತು ಕಾರ್ಮಿಕರು ಸ್ವ-ಉದ್ಯಮವನ್ನು ಆರಂಭಿಸಬಹುದು. 30 ಲಕ್ಷ ಸರ್ಕಾರಿ ಹುದ್ದೆಗಳು ಖಾಲಿ ಇದ್ದು, ಅದನ್ನು ಭರ್ತಿ ಮಾಡಲಾಗುವುದು' ಎಂದರು
'ಕೇಂದ್ರ ಸರ್ಕಾರವು ದೊಡ್ಡ ದೊಡ್ಡ ಖಾಸಗಿ ಕಂಪನಿಗಳ ₹16 ಲಕ್ಷ ಕೋಟಿ ಸಾಲವನ್ನು ಮನ್ನಾ ಮಾಡಿದೆ. ಆದರೆ ರೈತರಿಗೆ, ವಿದ್ಯಾರ್ಥಿಗಳಿಗೆ ಮತ್ತು ಕಾರ್ಮಿಕರಿಗೆ ವಿನಾಯಿತಿ ನೀಡುವ ಉದಾರತೆ ತೋರಿಲ್ಲ' ಎಂದು ಟೀಕಿಸಿದರು.
ಗುಜರಾತ್‌ನಲ್ಲಿ ಎರಡನೇ ದಿನದ ಯಾತ್ರೆ:
ಗುಜರಾತ್‌ನಲ್ಲಿ ಎರಡನೇ ದಿನದ ಯಾತ್ರೆಯು ದಾಹೊದ್‌ನಿಂದ ಆರಂಭವಾಗಿ ಗೋದ್ರಾಕ್ಕೆ ತಲುಪಿತು. ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಕಾಂಗ್ರೆಸ್‌ನ ಮಹಿಳಾ ಕಾರ್ಯಕರ್ತರು ತಂದಿದ್ದ ಬೃಹತ್ ಗಾತ್ರದ ಕೇಕ್ ಅನ್ನು ರಾಹುಲ್ ಗಾಂಧಿ ಕತ್ತರಿಸಿದರು.