ನವದೆಹಲಿ: ನಿವೃತ್ತ ಐಎಎಸ್ ಅಧಿಕಾರಿ ನವನೀತ್ ಕುಮಾರ್ ಸೆಹಗಲ್ ಅವರನ್ನು ಪ್ರಸಾರ ಭಾರತಿಯ ನೂತನ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.
ನವದೆಹಲಿ: ನಿವೃತ್ತ ಐಎಎಸ್ ಅಧಿಕಾರಿ ನವನೀತ್ ಕುಮಾರ್ ಸೆಹಗಲ್ ಅವರನ್ನು ಪ್ರಸಾರ ಭಾರತಿಯ ನೂತನ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.
ಪ್ರಸಾರ ಭಾರತಿ ಅಧ್ಯಕ್ಷರಾಗಿದ್ದ ಎ. ಸೂರ್ಯಪ್ರಕಾಶ್ ಅವರ ಕರ್ತವ್ಯಾವಧಿಯು 2020ರ ಫೆಬ್ರುವರಿಯಲ್ಲಿ ಮುಕ್ತಾಯವಾಗಿತ್ತು. ಅಲ್ಲಿಂದ ಇಲ್ಲಿಯವರೆಗೆ ನಾಲ್ಕು ವರ್ಷ ಆ ಹುದ್ದೆ ಖಾಲಿ ಇತ್ತು.
ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಈ ಕುರಿತು ಮಾಹಿತಿ ಬಹಿರಂಗಪಡಿಸಿದೆ. 'ಆಯ್ಕೆ ಸಮಿತಿಯ ಶಿಫಾರಸಿನ ಮೇರೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನವನೀತ್ ಕುಮಾರ್ ಸೆಹಗಲ್ ಅವರನ್ನು ಪ್ರಸಾರ ಭಾರತಿ ಮಂಡಳಿಯ ಮುಖ್ಯಸ್ಥರಾಗಿ ನೇಮಕ ಮಾಡಿದ್ದಾರೆ. ಸೆಹಗಲ್ ಅವರ ಕರ್ತವ್ಯಾವಧಿಯು ಅವರು ಕರ್ತವ್ಯ ವಹಿಸಿಕೊಂಡ ಮೊದಲ ದಿನದಿಂದ ಮುಂದಿನ ಮೂರು ವರ್ಷ ಅಥವಾ ಅವರಿಗೆ 70 ವರ್ಷ ವಯಸ್ಸಾಗುವವರೆಗೆ ಇರಲಿದೆ' ಎಂದು ಆದೇಶದ ಪ್ರತಿಯಲ್ಲಿ ನಮೂದಿಸಲಾಗಿದೆ.
ಅಧ್ಯಕ್ಷರ ಆಯ್ಕೆಗಾಗಿ ರಾಜ್ಯಸಭೆ ಸಭಾಪತಿ ಜಗದೀಪ್ ಧನಕರ್ ಅವರ ನೇತೃತ್ವದಲ್ಲಿ ಶುಕ್ರವಾರ ಸಭೆ ನಡೆಯಿತು. ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ ಮತ್ತು ರಾಷ್ಟ್ರಪತಿ ಅವರಿಂದ ನಾಮನಿರ್ದೇಶನಗೊಂಡ ಒಬ್ಬರು ಸದಸ್ಯರು ಆಯ್ಕೆ ಸಮಿತಿಯಲ್ಲಿದ್ದರು.