ಬದಿಯಡ್ಕ: ಕುಂಬ್ಡಾಜೆ ಪೊಡಿಪ್ಪಳ್ಳ ಶ್ರೀ ಚೀರುಂಬಾ ಭಗವತಿ ಕ್ಷೇತ್ರ ಟ್ರಸ್ಟ್ ಆಶ್ರಯದಲ್ಲಿ ಮಂಗಳೂರು ಅತ್ತಾವರ ಕೆ.ಎಂ.ಸಿ.ಆಸ್ಪತ್ರೆಯ ಸಹಕಾರದೊಂದಿಗೆ ಉಚಿತ ವೈದ್ಯಕೀಯ ಶಿಬಿರ ನಡೆಯಿತು. ಪೆÇಡಿಪ್ಪಳ್ಳ ಶ್ರೀ ಚೀರುಂಬಾ ಭಗವತಿ ಸಭಾ ಭವನದಲ್ಲಿ ನಡೆದ ವೈದ್ಯಕೀಯ ಶಿಬಿರವನ್ನು ಅನಿವಾಸಿ ಉದ್ಯಮಿ ಶಿವಶಂಕರ ನೆಕ್ರಾಜೆ, ಆಚಾರ ಸ್ಥಾನಿಕರಾದ ಅಂಬಾಡಿ ಕಾರ್ನವರ್ ದೀಪ ಬೆಳಗಿಸಿ ಉದ್ಘಾಟಿಸಿದರು.
ಕುಂಬ್ಡಾಜೆ ಗ್ರಾಮ ಪಂಚಾಯಿತಿ ಸದಸ್ಯರಾದ ಹರೀಶ್ ಗೋಸಾಡ, ಖದೀಜ, ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಸಂಯೋಜನಾಧಿಕಾರಿ ದಿನೇಶ್ ಕೆ ಕೊಕ್ಕಡ, ಜನಪ್ರಿಯ ವೈದ್ಯ ಡಾ.ಶ್ರೀನಿಧಿ ಸರಳಾಯ, ಕ್ಷೇತ್ರ ಆಡಳಿತ ಸಮಿತಿ ಅಧ್ಯಕ್ಷ ವಸಂತನ್ ಚೇಂಬೋಡು, ಟ್ರಸ್ಟ್ ಅಧ್ಯಕ್ಷ ಗಂಗಾಧರ ಪಳ್ಳತ್ತಡ್ಕ, ರವಿ ನವಶಕ್ತಿ, ಪ್ರಸಾದ್ ಕಡಂಬು, ಸದಾಶಿವ ಮೈಲುತೊಟ್ಟಿ, ಚಿರಿಯಂಡ ಬಡಕಾಜೆ ಮೊದಲಾದವರು ಉಪಸ್ಥಿತರಿದ್ದರು. ವಿಶ್ವನಾಥ ಬಳ್ಳಪದವು ಸ್ವಾಗತಿಸಿದರು. ಕಣ್ಣು, ಉದರ ರೋಗ, ಇ.ಎನ್.ಟಿ, ಕ್ಯಾನ್ಸರ್,ಜನರಲ್ ವಿಭಾಗದ ತಜ್ಞ ವೈದ್ಯರಿಂದ ತಪಾಸಣೆ, ಉಚಿತ ಕನ್ನಡಕ ವಿತರಣೆ ನಡೆಯಿತು. ಈ ಸಂದರ್ಭ ಕ್ಯಾನ್ಸರ್ ರೋಗದ ಬಗ್ಗೆ ತಿಳುವಳಿಕಾ ತರಗತಿ ಹಮ್ಮಿಕೊಳ್ಳಲಾಯಿತು.