ಬದಿಯಡ್ಕ: ಕುಂಬ್ಡಾಜೆ ಗ್ರಾಮಸೇವಾ ಸಂಘ ಗ್ರಂಥಾಲಯ ಏತಡ್ಕದ ಆಶ್ರಯದಲ್ಲಿ ವಿಕಸನಕ್ಕಾಗಿ ವಿಜ್ಞಾನ ಎಂಬ ವಿಷಯದಲ್ಲಿ ವಿಚಾರಗೋಷ್ಠಿ ಸಮಾಜಮಂದಿರ ಏತಡ್ಕದಲ್ಲಿ ಸೋಮವಾರ ಜರಗಿತು.
ಗ್ರಂಥಾಲಯದ ಅಧ್ಯಕ್ಷ ವೈ ಕೆ ಗಣಪತಿ ಭಟ್ ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಪಂಚಾಯತಿ ಲೈಬ್ರರಿ ಕನ್ವೀನರ್ ಅಶ್ರಫ್ ಬೆಳಿಂಜ ಸಂಪನ್ಮೂಲ ವ್ಯಕ್ತಿಯಾಗಿ ಉಪಸ್ಥಿತರಿದ್ದರು. ಕಾರ್ಯದರ್ಶಿ ಗಣರಾಜ ಕೆ ಹಾಗೂ ಗ್ರಂಥಾಲಯದ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.