ನವದೆಹಲಿ: ಶಬರಿಮಲೆಯ ಅರವಣದಲ್ಲಿ ಕೀಟನಾಶಕ ಬಳಕೆ ಕುರಿತ ಅರ್ಜಿಯನ್ನು ಕೇರಳ ಹೈಕೋರ್ಟ್ ಪರಿಗಣಿಸಬಾರದಿತ್ತು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ನ್ಯಾಯಮೂರ್ತಿಗಳಾದ ಎಎಸ್ ಬೋಪಣ್ಣ ಮತ್ತು ಪಿ ಎಸ್ ನರಸಿಂಹ ಅವರನ್ನೊಳಗೊಂಡ ಪೀಠ ಈ ತೀರ್ಪು ನೀಡಿದೆ.
ಕಲಬೆರಕೆಯ ಏಲಕ್ಕಿ ಸರಬರಾಜು ಮಾಡಿದ ಗುತ್ತಿಗೆದಾರರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ನಿರ್ದೇಶಿಸಿದ ಕೇರಳ ಹೈಕೋರ್ಟ್ ಆದೇಶವನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ.ಒಂದು ಗುತ್ತಿಗೆಯನ್ನು ಕಳೆದುಕೊಂಡಿರುವ ಸಂಸ್ಥೆಯ ಮನವಿಯನ್ನು ಹೈಕೋರ್ಟ್ ಪರಿಗಣಿಸಬಾರದು ಎಂದು ಪೀಠ ಹೇಳಿದೆ.
ಹೈಕೋರ್ಟ್ ನಿರ್ದೇಶನದ ಮೇರೆಗೆ ಆಡಳಿತ ಮಂಡಳಿ ಅರವಣ ಮಾರಾಟವನ್ನು ನಿಲ್ಲಿಸಿತ್ತು. ಅರವಣದ ಕಾಲಾವಧಿ ಪರಿಗಣಿಸಿ ನಂತರ ಅದರ ನಾಶಕ್ಕೆ ಸುಪ್ರೀಂ ಕೋರ್ಟ್ ಅನುಮತಿ ನೀಡಿತು.