ನವದೆಹಲಿ: ದೇಶದಲ್ಲಿ ಈ ಬಾರಿ ಬೇಸಿಗೆಯ ಅವಧಿಯಲ್ಲಿ ಸೆಕೆ ತೀವ್ರವಾಗಿರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಸಿರುವ ಹಿನ್ನೆಲೆಯಲ್ಲಿ, ಮತಗಟ್ಟೆಗಳಲ್ಲಿ ಕನಿಷ್ಠ ಸೌಲಭ್ಯಗಳು, ಕುಡಿಯುವ ನೀರು, ನೆರಳು ಮತ್ತು ವೈದ್ಯಕೀಯ ಉಪಕರಣಗಳನ್ನು ಒದಗಿಸಲೇಬೇಕು ಎಂದು ಚುನಾವಣಾ ಆಯೋಗ ಖಡಕ್ ಸೂಚನೆ ನೀಡಿದೆ.

ಉಷ್ಣ ಗಾಳಿಯ ಪರಿಣಾಮಗಳನ್ನು ಕಡಿಮೆ ಮಾಡುವ ಉದ್ದೇಶದಿಂದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರವು (ಎನ್‌ಡಿಎಂಎ) ಹೊರಡಿಸಿರುವ ಸೂಚನೆಗಳನ್ನು ಆಯೋಗವು ವಿವಿಧ ರಾಜ್ಯಗಳ ಮುಖ್ಯ ಚುನಾವಣಾ ಅಧಿಕಾರಿಗಳಿಗೆ (ಸಿಇಒ) ರವಾನಿಸಿದೆ.
2023ರ ಜೂನ್‌ನಲ್ಲಿ ಹೊರಡಿಸಿದ್ದ ಸೂಚನೆಯಲ್ಲಿ, ಪ್ರತಿ ಮತಗಟ್ಟೆಯಲ್ಲಿಯೂ ಒಆರ್‌ಎಸ್ ಲಭ್ಯವಿರಬೇಕು, ಮತಗಟ್ಟೆಯ ಸಿಬ್ಬಂದಿಗೆ ಹಾಗೂ ಯಾವುದೇ ಮತದಾರನಿಗೆ ಅಗತ್ಯ ಎದುರಾದರೆ ನೀಡಲು ಇದನ್ನು ಇರಿಸಿಕೊಳ್ಳಬೇಕು ಎಂದು ಹೇಳಲಾಗಿತ್ತು. ಅದೇ ಸೂಚನೆಯನ್ನು ಈಗ ಮತ್ತೆ ನೀಡಲಾಗಿದೆ.
'ಸನ್ ಸ್ಟ್ರೋಕ್ ಸಂದರ್ಭದಲ್ಲಿ ಪಾಲಿಸಬೇಕಾದ ನಿಯಮಗಳನ್ನು ಎಲ್ಲ ಮತಗಟ್ಟೆಗಳಿಗೆ ರವಾನಿಸಬಹುದು. ನಿರ್ಜಲೀಕರಣದ ಅಪಾಯದಿಂದ ರಕ್ಷಿಸಿಕೊಳ್ಳಲು ಒದ್ದೆ ಟವೆಲ್ ತರುವಂತೆ ಮತದಾರರಿಗೆ ಸೂಚಿಸಬಹುದು, ಉಷ್ಣಾಂಶ ಹೆಚ್ಚಿದ್ದಾಗ ಮತಗಟ್ಟೆಗಳಿಗೆ ಮಕ್ಕಳನ್ನು ಕರೆತರದಂತೆ ಮಹಿಳಾ ಮತದಾರರಿಗೆ ಸೂಚಿಸಬಹುದು' ಎಂದು ತಿಳಿಸಲಾಗಿದೆ.