ಕಾಸರಗೋಡು: ಜಿಲ್ಲೆಯಲ್ಲಿ ನಡೆಯುವ ಹಬ್ಬ, ಸಭೆ, ಸಮಾರಂಭಗಳು ಹಾಗೂ ಸಾರ್ವತ್ರಿಕ ಚುನಾವಣಾ ಪ್ರಚಾರಗಳನ್ನು ಹಸಿರು ಸಂಹಿತೆಯಂತೆ ನಡೆಸಬೇಕು ಎಂದು ಮಾಲಿನ್ಯ ಮುಕ್ತ ನವಕೇರಳ ಜಿಲ್ಲಾ ಸಮನ್ವಯ ಸಮಿತಿ ತಿಳಿಸಿದೆ.
ವಿದ್ಯಾನಗರದಲ್ಲಿರುವ ಸ್ಥಳೀಯಾಡಳಿತ ಇಲಾಖೆ ಜಂಟಿ ನಿರ್ದೇಶಕರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಯಿತು. ಸ್ಥಳೀಯಾಡಳಿತ ಸಂಸ್ಥೆಗಳ ಸಹಾಯಕ ನಿರ್ದೇಶಕ ಟಿ.ವಿ.ಸುಭಾಷ್ ಅಧ್ಯಕ್ಷತೆ ವಹಿಸಿದ್ದರು. ಎಲ್ಲಾ ವಾರ್ಡ್‍ಗಳಲ್ಲಿ ಕಸಮುಕ್ತ ಎಂದು ಘೋಷಿಸಲು ಅಗತ್ಯ ಕ್ರಮಕೈಗೊಳ್ಳುವಂತೆ ಸ¨ಭೆಯಲ್ಲಿ ಸಊಚಿಸಲಾಯಿತು. ಬಳಕೆದಾರರ ಶುಲ್ಕ ಸಂಗ್ರಹಣೆಯನ್ನು ಪೂರ್ಣಗೊಳಿಸಲು ಹಸಿರು ಕ್ರಿಯಾಸೇನೆಯು ತನ್ನ ಕೆಲಸವನ್ನು ಸಮಯ ಬದ್ಧಗೊಳಿಸಬೇಕು. ಸಾರ್ವಜನಿಕ ಸ್ಥಳಗಳು ಮತ್ತು ಜಲಾನಯನ ಪ್ರದೇಶಗಳಲ್ಲಿ ಕಸ ಎಸೆಯುವವರ ವಿರುದ್ಧ ಕಟ್ಟುನಿಟ್ಟಿನ ತಪಾಸಣೆಯ ಮೂಲಕ ಕ್ರಮ ಕೈಗೊಳ್ಳುವಂತೆ ಜಾಗೃತ ದಳ ಮತ್ತು ಜಿಲ್ಲಾ ಜಾರಿ ತಂಡಗಳಿಗೆ ಸೂಚಿಸಲಾಯಿತು
ಸಭೆಯಲ್ಲಿ ತ್ಯಾಜ್ಯ ಸಂಗ್ರಹಾಗಾರಗಳಲ್ಲಿ ಅಗ್ನಿ ಸುರಕ್ಷತಾ ವ್ಯವಸ್ಥೆಯನ್ನು ಖಾತ್ರಿಪಡಿಸಿಕೊಳ್ಳಬೇಕು, ಕ್ಲೀನ್ ಕೇರಳ ಕಂಪನಿ ಮತ್ತು ಇತರ ಹಸಿರು ನೆರವು ಸಂಸ್ಥೆಗಳು ಅಜೈವಿಕ ತ್ಯಾಜ್ಯವನ್ನು ಎಂಸಿಎಫ್‍ಗಳಲ್ಲಿ ರಾಶಿ ಹಾಕದೆ, ಬದಲಿ ವಯವಸ್ಥೆ ನಡೆಸಬೇಕು ಎಂದು ಸೂಚಿಸಲಾಯಿತು
ಸಹ ಸಂಯೋಜಕ ಎಚ್.ಕೃಷ್ಣ, ಸಹಾಯಕ ಯೋಜನಾಧಿಕಾರಿ ರಿಜು ಮ್ಯಾಥ್ಯೂ, ಕ್ಲೀನ್ ಕೇರಳ ಕಂಪನಿ ಜಿಲ್ಲಾ ವ್ಯವಸ್ಥಾಪಕ ಬಿ.ಮಿಥುನ್, ಕಿಲಾ ಜಿಲ್ಲಾ ಸಂಚಾಲಕ ಕೆ.ಅಜಯಕುಮಾರ್, ಶುಚಿತ್ವ ಮಿಷನ್ ಸಹಾಯಕ ಸಂಯೋಜಕ ಎಂ.ಟಿ.ಪಿ.ರಿಯಾಸ್, ಕೆ.ಬಾಬುರಾಜ್, ಸಿ.ಎಂ.ಬೈಜು, ಟಿ.ಹೃತಿಕ್ ಉಪಸ್ಥಿತರಿದ್ದರು.
ನವಕೇರಳ ಕ್ರಿಯಾ ಯೋಜನೆ ಜಿಲ್ಲಾ ಸಂಯೋಜಕ ಕೆ.ಬಾಲಕೃಷ್ಣನ್ ಸ್ವಾಗತಿಸಿದರು. ಕ್ಲೀನ್ ಕೇರಳ ಕಂಪನಿಯು ಜಿಲ್ಲೆಯಲ್ಲಿ ನಡೆಸಿದ 2024 ರ ತ್ಯಾಜ್ಯ ಸಂಗ್ರಹಣೆ ಕ್ಯಾಲೆಂಡರ್ ಅನ್ನು ಬಿಡುಗಡೆ ಮಾಡಲಾಯಿತು. ಕ್ಯಾಲೆಂಡರ್ ಪ್ರಕಾರ, ಮಾರ್ಚ್ ತಿಂಗಳಿನಲ್ಲಿ ಅಪಾಯಕಾರಿ ಇ-ತ್ಯಾಜ್ಯವನ್ನೂ ಸಂಗ್ರಹಿಸಲಾಗುತ್ತಿದೆ.