ಕಾಸರಗೋಡು: ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆ ಕಾಸರಗೋಡು ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಜರುಗಿತು. ಜಿಲ್ಲಾ ಚುನಾವಣಾಧಿಕಾರಿಯೂ ಆದ ಜಿಲ್ಲಾಧಿಕಾರಿ ಕೆ. ಇನ್‍ಬಾಶೇಖರ್ ಅಧ್ಯಕ್ಷತೆ ವಹಿಸಿದ್ದರು. ರಾಜಕೀಯ ಪಕ್ಷಗಳು ಹಾಗೂ ಅಭ್ಯರ್ಥಿಗಳು ಚುನಾವಣಾ ಮಾದರಿ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು . ಕಾನೂನು ಉಲ್ಲಂಘಿಸಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಬಂದಿರುವ ದೂರುಗಳ ಕುರಿತು ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಚರ್ಚಿಸಿದರು. ದೂರುಗಳ ಸ್ಥಿತಿಗತಿ ಕುರಿತು ರಾಜಕೀಯ ಪಕ್ಷಗಳಿಗೆ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿ ಸೂಚನೆ ನೀಡಿದರು.
ನಾಮಪತ್ರ ಸಲ್ಲಿಕೆ, ವೆಚ್ಚದ ಮೇಲ್ವಿಚಾರಣೆ, ಮಾಧ್ಯಮ ಪ್ರಮಾಣೀಕರಣ ಮತ್ತು ಮೇಲ್ವಿಚಾರಣಾ ವ್ಯವಸ್ಥೆ ಬಗ್ಗೆ ಜಿಲ್ಲಾಧಿಕಾರಿ ಮಾಹಿತಿ ನೀಡಿದರು. ಮತದಾನದ ದಿನಪೂರ್ತಿ ಪಕ್ಷಗಳ ಬಿ.ಎಲ್. ಎಲ್ಲರೂ ಬೂತ್‍ಗಳಲ್ಲಿದ್ದು ಶಾಂತಿಯುತ ವಾತಾವರಣದ ಮತದಾನಕ್ಕೆ ಅವಕಾಶ ಮಾಡಿಕೊಡಬೇಕು ಎಂದು ತಿಳಿಸಿದರು.
ರಾಜಕೀಯ ಪಕ್ಷಗಳ ಪ್ರತಿನಿಧಿಗಳಾದ ಎಂ. ಕುಞಂಬು ನಂಬಿಯಾರ್, ಟಿಎಂಎ ಕರೀಂ, ಅಬ್ದುಲ್ಲಕುಞÂ ಚೆರ್ಕಳ, ವಿ. ರಾಜನ್, ವಕೀಲ.ಪಿ. ಅನಂತರಾಮ, ವಕೀಲ ಕೆ.ಪಿ.ಸುರೇಶ್, ಫತಾಹ್ ಬಂಗರ, ಎಆರ್‍ಒ ಗಳಾದ ಸುಫಿಯಾನ್ ಅಹಮದ್, ಪಿ. ಶಾಜು, ನಿರ್ಮಲ್ ರೀಟಾ ಗೋಮ್ಸ್, ಪಿ. ಬಿನುಮೋನ್, ಜೆಗ್ಗಿ ಪಾಲ್, ಸಹಾಯಕ ಜಿಲ್ಲಾಧಿಕಾರಿ ದಿಲೀಪ್ ಕೈನಿಕರ, ವೆಚ್ಚ ನೋಡಲ್ ಅಧಿಕಾರಿ ವಿ. ಚಂದ್ರನ್, ಚುನಾವಣಾ ಅಪರ ಜಿಲ್ಲಾಧಿಕಾರಿ ಪಿ. ಅಖಿಲ್, ಇಆರ್‍ಗಳು ಮತ್ತು ತಹಶೀಲ್ದಾರರಾದ ಪಿ. ಶಿಬು, ಎಂ. ಮಾಯಾ ಹಾಗೂ ಪಿ.ಎಂ.ಅಬೂಬಕರ್ ಸಿದ್ದೀಕ್ ಪಾಲ್ಗೊಮಡಿದ್ದರು. ಸಭೆಯ ನಂತರ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಉಪಸ್ಥಿತಿಯಲ್ಲಿ ಜಿಲ್ಲಾಧಿಕಾರಿ ಕೆ. ಇನ್‍ಬಾಶೇಕರ್ ಇವಿಎಂ ಗೋದಾಮಿನಲ್ಲಿ ತ್ರೈಮಾಸಿಕ ತಪಾಸಣೆ ನಡೆಸಿದರು.