ಮುಳ್ಳೇರಿಯ: ಅಡೂರು ಗ್ರಾಮದ ಪಾಂಡಿ ಬೆದಿರಡ್ಕ ಬಳಿ ಅಬಕಾರಿ ದಳ ಸಿಬ್ಬಂದಿ ನಡೆಸಿದ ಕಾರ್ಯಾಚರಣೆಯಲ್ಲಿ 20ಲೀ. ಮದ್ಯ ಹಾಗೂ ಮದ್ಯ ತಯಾರಿಸಲು ದಾಸ್ತಾನಿರಿಸಿದ್ದ 300ಲೀ. ಹುಳಿರಸ ವಶಪಡಿಸಿಕೊಂಡಿದ್ದಾರೆ. ಸ್ಥಳದಿಂದ ವಾರಸುದಾರರಿಲ್ಲದ ಸಥಿತಿಯಲ್ಲಿದ್ದ ಎರಡು ಮೊಬೈಲನ್ನೂ ವಶಪಡಿಸಿಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಪಾಂಡಿ ಬೆದಿರಡ್ಕ ನಿವಾಸಿ ರವೀಂದ್ರನ್ ಎಂಬಾತನ ವಿರುದ್ಧ ಕೇಸು ದಾಖಲಿಸಿಕೊಂಡಿದ್ದಾರೆ.
ಈ ಪ್ರದೇಶದಲ್ಲಿ ಭಾರಿ ಪರಮಾಣದಲ್ಲಿ ನಕಲಿ ಮದ್ಯ ತಯಾರಿಸುತ್ತಿರುವ ಬಗ್ಗೆ ಲಭಿಸಿದ ಮಾಹಿತಿಯನ್ವಯ ಅಬಕಾರಿ ಗುಪ್ತಚರ ಬ್ಯೂರೋ ನಿರ್ದೇಶನದ ಮೇರೆಗೆ ಬದಿಯಡ್ಕ ರೇಂಜ್ ಪ್ರಿವೆಂಟಿವ್ ಅಧಿಕಾರಿ ರವೀಂದ್ರನ್ ಎಂ.ಕೆ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.