ಮಂಜೇಶ್ವರ: ವರ್ಕಾಡಿ ಕಾವಿ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ನಡೆಯಲಿರುವ ಬ್ರಹ್ಮಕಲಶೋತ್ಸವ ಸಮಾರಂಭದ ಆಮಂತ್ರಣಪತ್ರಿಕೆ ಬಿಡುಗಡೆ ಸಮಾರಂಭ ದೇವಸ್ಥಾನದಲ್ಲಿ ಜರುಗಿತು. ಬ್ರಹ್ಮಶ್ರೀ ದಿನೇಶ್‍ಕೃಷ್ಣ ತಂತ್ರಿ ಅವರು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸತೀಶ್ ಕುಂಪಲ ಅವರಿಗೆ ನೀಡುವ ಮೂಲಕ ಬಿಡುಗಡೆಗೊಳಿಸಿದರು.
ದೇವಸ್ಥಾನದ ಅರ್ಚಕ ವಾಸುದೇವ ಮಯ್ಯ, ಸುಭಾಶ್ಚಂದ್ರ ಅಡಪ, ಡಾ. ಶಂಕರ ಕೆ.ಎಸ್ ಕೋಡಿ, ವಿಕ್ರಂ ದತ್ತ, ಸದಾಶಿವ ನಾಯ್ಕ್ ಮಂಟಮೆ, ಪ್ರಭಾಕರ ರೈ ಕಲ್ಪನೆ, ಶ್ಯಾಮ ವಿಠಲ್ ಕೋಡಿ, ಕಿಶೋರ್ ಕುಮಾರ್ ಶೆಟ್ಟಿ, ರಾಮಣ್ಣ ಶೆಟ್ಟಿ ಅಲಬೆಗುತ್ತು, ಆನಂದ ತಚ್ಚಿರೆ, ಐತ್ತಪ್ಪ ಶೆಟ್ಟಿ, ಸೀತಾರಾಮ ಬೇರಿಂಜ, ಸರಸ್ವತೀ ಹೊಳ್ಳ ಕೋಡಿ, ಪ್ರಭಾಶಂಕರ್ ನಾಯ್ಕ್, ರವೀಂದ್ರ ಕುಲಾಲ್, ಪೂರ್ಣಿಮಾ ಬೇರಿಂಜ, ವಿನೋದ್ ಪಾವೂರು ಉಪಸ್ಥಿತರಿದ್ದರು. ದೇವಸ್ಥಾನದಲ್ಲಿ ಮಾ. 29ರಿಂದ ಏ. 5ರ ವರೆಗೆ ಬ್ರಹ್ಮಕಲಶೋತ್ಸವ ನಡೆಯಲಿರುವುದು.