ಉಪ್ಪಳ: ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮ ಮಠದಲ್ಲಿ ಮಾರ್ಚ್ 24 ರಂದು ನಕ್ಷತ್ರವನದಲ್ಲಿ ಪ್ರತಿಷ್ಠಾಪನೆಗೊಳ್ಳಲಿರುವ ನೂತನ ಶಿಲಾಮಯ ನವಗ್ರಹ ವಿಗ್ರಹಗಳ ಮೆರವಣಿಗೆಯು ಉದ್ಯಾವರ ಮಾಡ ಶ್ರೀ ಅರಸು ಮಂಜಿಷ್ಣಾರ್ ಕ್ಷೇತ್ರದಲ್ಲಿ ಪರಮಪೂಜ್ಯ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ವಿಶೇಷ ಪ್ರಾರ್ಥನೆಯೊಂದಿಗೆ ಆರಂಭಗೊಂಡು ಹೊಸಂಗಡಿ ಶ್ರೀ ಅಯ್ಯಪ್ಪ ಕ್ಷೇತ್ರಕ್ಕೆ ತಲುಪಿಸಲಾಯಿತು. ಅಲ್ಲಿಂದ ಆದಿತ್ಯವಾರ ಬೆಳಿಗ್ಗೆ ವಾಹನಗಳ ಮೂಲಕ ಉಪ್ಪಳ ಪೇಟೆಗೆ ಆಗಮಿಸಿ ಉಪ್ಪಳ ಪೇಟೆಯಿಂದ ಚೆಂಡೆ, ಭಜನೆ ಹಾಗೂ ಪೂರ್ಣಕುಂಭ ಸ್ವಾಗತದ ಭವ್ಯ ಮೆರವಣಿಗೆಯೊಂದಿಗೆ ಶ್ರೀ ಮಠಕ್ಕೆ ತಲುಪಿತು. ಬಳಿಕ ನವಗ್ರಹಗಳಿಗೆ ಶ್ರೀಗಳು ವಿಶೇಷ ಪೂಜೆ ಸಲ್ಲಿಸಿದರು.
ಮಾರ್ಚ್ 24 ರಂದು ನಡೆಯುವ ಅμÉ್ಟೂೀತ್ತರ ಸಹಸ್ರ ನವಗ್ರಹ ಯಾಗದಲ್ಲಿ ಉಪಯೋಗಿಸಲ್ಪಡುವ ನವಧಾನ್ಯ ಮತ್ತು ಸಮಿತ್ತುಗಳನ್ನು ಭಕ್ತಾಧಿಗಳು ಸಮರ್ಪಿಸಿದರು. ಬಳಿಕ ಯಾಗದ ಪೂರ್ವಭಾವಿ ಕಾರ್ಯಕರ್ತರ ವಿಶೇಷ ಸಭೆ ಜರಗಿ ವಿವಿಧ ವಿಭಾಗಗಳ ಜವಾಬ್ದಾರಿ ಘೋಷಣೆ ಮಾಡಲಾಯಿತು.