ಕೊಟ್ಟಾಯಂ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕೋಕೋ ಬೆಲೆ ಒಂದು ವರ್ಷದಲ್ಲಿ ಶೇ.200ರಷ್ಟು ಹೆಚ್ಚಾಗಿದೆ. ಕೇರಳದಲ್ಲಿ ಒಣ ಕೋಕೋ ಕೆಜಿಗೆ 670 ರೂ.ಬೆಲೆಯಿದೆ.
ಕಳೆದ ವರ್ಷ 250 ರೂ.ಗಳಷ್ಟಿತ್ತು. ಆದರೆ ಕೇರಳದ ರೈತರ ಸ್ಥಿತಿ ಅಂಜೂರ ಹಣ್ಣಾದಾಗ ಕಾಗೆಗೆ ನಾಲಗೆ ಹುಣ್ಣು ಎಂಬ ಹಳೇ ಮಾತಿನಂತಾಗಿದೆ. ಕೊಡಲು ಕೋಕೋ ಇಲ್ಲ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕೋಕೋ ಪ್ರತಿ ಟನ್‍ಗೆ $10,000 ದಾಟಿದೆ. ಇಷ್ಟ್ಟು ಕಡಮೆ ಅವಧಿಯಲ್ಲಿ ಭಾರೀ ಬೆಲೆ ಏರಿಕೆ ಕಂಡಿರುವ ಬೇರಾವ ಕೃಷಿ ಉತ್ಪನ್ನವೂ ಇಲ್ಲ. ಇದು ಪ್ರಯೋಜನಕಾರಿಯಾಗದಿರಲು ಕಾರಣ ಕೇರಳದಲ್ಲಿ ಪ್ರಸ್ತುತ ಕೋಕೋ ಫಸಲು ನೀಡುವ ಕಾಲವಲ್ಲ. ಉತ್ಪಾದನೆಯು ಶೇಕಡಾ 10 ಕ್ಕಿಂತ ಕಡಮೆ ಎಂದು ಅಂದಾಜಿಸಲಾಗಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕೋಕೋ ಕೊರತೆಯಾಗಿರುವುದು ಬೆಲೆ ಏರಿಕೆಗೆ ಕಾರಣ. ಇದು ಚಾಕೊಲೇಟ್ ತಯಾರಿಕೆಯ ಮೇಲೂ ಪರಿಣಾಮ ಬೀರಿದೆ. ಇದರಿಂದ ದುಬಾರಿಯಾಗುತ್ತಿದೆ. 500 ಗ್ರಾಂ ಚಾಕೊಲೇಟ್ ತಯಾರಿಸಲು 400 ಬೀಜಗಳು ಬೇಕಾಗುತ್ತವೆ ಎಂದು ಅಂದಾಜಿಸಲಾಗಿದೆ. ಒಂದು ಮರವು ವರ್ಷಕ್ಕೆ ಗರಿಷ್ಠ 2500 ಹಣ್ಣುಗಳನ್ನು ನೀಡುತ್ತದೆ. ಒಂದು ಅಂದಾಜಿನ ಪ್ರಕಾರ ಪ್ರಪಂಚಕ್ಕೆ ಒಂದು ವರ್ಷದಲ್ಲಿ 75 ಲಕ್ಷ ಟನ್ ಚಾಕೊಲೇಟ್ ಅಗತ್ಯವಿದೆ. ಯುರೋಪ್ ಮತ್ತು ಅಮೆರಿಕದಲ್ಲಿ ಚಾಕೊಲೇಟ್ ಮತ್ತು ಸಂಬಂಧಿತ ಉತ್ಪನ್ನಗಳ ದಾಸ್ತಾನು ಕುಸಿಯುತ್ತಿದೆ.
ಬೆಲೆ ಏರಿಕೆಯ ಸುದ್ದಿ ತಿಳಿದ ರೈತರು ಕೋಕೋ ಗಿಡಗಳಿಗಾಗಿ ಈಗ ಪರದಾಡುತ್ತಿದ್ದಾರೆ. ಆದರೆ ಕೋಕೋ ಕೊರತೆಯಿಂದ ಹೆಚ್ಚಿದ ಬೆಲೆ ಕೋಕೋ ಲಭ್ಯವಾದಾಗ ಸಿಗುವುದಿಲ್ಲ ಎಂಬುದನ್ನು ನೆನಪಿಟ್ಟುಕೊಳ್ಳುವುದು ಒಳ್ಳೆಯದು.