ನವದೆಹಲಿ: ಅಂತರರಾಷ್ಟ್ರೀಯ ಡ್ರಗ್ ಮಾಫಿಯಾದೊಂದಿಗೆ ನಂಟು ಹೊಂದಿದ್ದ ಆರೋಪದ ಮೇಲೆ ಡಿಎಂಕೆ ಪಕ್ಷದ ಮಾಜಿ ನಾಯಕ ಜಾಫರ್ ಸಾದಿಕ್ ಎಂಬವರನ್ನು ಮಾದಕವಸ್ತು ನಿಯಂತ್ರಣ ದಳ (ಎನ್‌ಸಿಬಿ) ಶನಿವಾರ ಬಂಧಿಸಿದೆ.
ನವದೆಹಲಿ: ಅಂತರರಾಷ್ಟ್ರೀಯ ಡ್ರಗ್ ಮಾಫಿಯಾದೊಂದಿಗೆ ನಂಟು ಹೊಂದಿದ್ದ ಆರೋಪದ ಮೇಲೆ ಡಿಎಂಕೆ ಪಕ್ಷದ ಮಾಜಿ ನಾಯಕ ಜಾಫರ್ ಸಾದಿಕ್ ಎಂಬವರನ್ನು ಮಾದಕವಸ್ತು ನಿಯಂತ್ರಣ ದಳ (ಎನ್‌ಸಿಬಿ) ಶನಿವಾರ ಬಂಧಿಸಿದೆ.
ಸಾದಿಕ್, ಭಾರತ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ನಡುವೆ ಹರಡಿಕೊಂಡಿರುವ ಮಾದಕ ಜಾಲದ 'ಮಾಸ್ಟರ್‌ಮೈಂಡ್ ಹಾಗೂ ಕಿಂಗ್‌ಪಿನ್' ಎಂದು ಎನ್‌ಸಿಬಿ ಹೆಸರಿಸಿದೆ.
ತಮಿಳು ಸಿನಿಮಾ ನಿರ್ಮಾಪಕರೂ ಆಗಿರುವ ಸಾದಿಕ್ ಹೆಸರು ಮಾದಕ ವಸ್ತು ಜಾಲದೊಂದಿಗೆ ಕೇಳಿ ಬಂದ ಬೆನ್ನಲ್ಲೇ, ಡಿಎಂಕೆ ಅವರನ್ನು ಪಕ್ಷದಿಂದ ಇತ್ತೀಚೆಗೆ ಉಚ್ಚಾಟನೆ ಮಾಡಿತ್ತು ಎಂದು ತನಿಖಾ ಸಂಸ್ಥೆ ಉಲ್ಲೇಖಿಸಿದೆ.
ಸಾದಿಕ್ ವಿಚಾರವಾಗಿ ತಮಿಳುನಾಡು ಡಿಎಂಕೆ ಸರ್ಕಾರದ ವಿರುದ್ಧ, ವಿರೋಧ ಪಕ್ಷ ಎಐಎಡಿಎಂಕೆ ಹಾಗೂ ಬಿಜೆಪಿ ಟೀಕಾಪ್ರಹಾರ ನಡೆಸುತ್ತಿವೆ.
ದೆಹಲಿಯ ಗೋದಾಮಿನಲ್ಲಿ ಸುಮಾರು ₹ 50 ಕೋಟಿ ಮೊತ್ತದ ಮಾದಕವಸ್ತುವನ್ನು ವಶಪಡಿಸಿಕೊಂಡು, ತಮಿಳುನಾಡು ಮೂಲದ ಮೂವರನ್ನು ಬಂಧಿಸಿರುವುದಾಗಿ ಎನ್‌ಸಿಬಿ ಕಳೆದ ತಿಂಗಳು ಹೇಳಿತ್ತು.