ಚೆನ್ನೈ: ಸನಾತನ ಧರ್ಮ ಕುರಿತ ನಿಂದನಾತ್ಮಕ ಹೇಳಿಕೆಗೆ ತಮಿಳು ನಾಡು ಸಚಿವ ಉದಯನಿಧಿ ಸ್ಟಾಲಿನ್ ಸಹಿತ ಸಚಿವರಾದ ಶೇಖರ್ ಬಾಬು ಹಾಗೂ ಸಂಸದ ಎ ರಾಜಾ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಸಲ್ಲಿಸಲಾಗಿದ್ದ ಅರ್ಜಿಯ ಕುರಿತಂತೆ ಇತ್ತೀಚಿಗಿನ ತೀರ್ಪಿನಲ್ಲಿ ಜಾತಿ ವ್ಯವಸ್ಥೆಯ ಮೂಲದ ಕುರಿತಂತೆ ಇರುವ ಉಲ್ಲೇಖಗಳನ್ನು ತೀರ್ಪಿನಿಂದ ಮದ್ರಾಸ್ ಹೈಕೋರ್ಟ್ ತೆಗೆದುಹಾಕಿದೆ.
ಮಾರ್ಚ್ 6ರಂದು ಅಪ್‌ಲೋಡ್ ಮಾಡಲಾದ ತೀರ್ಪಿನ ಪ್ರತಿಯಲ್ಲಿ ನ್ಯಾಯಮೂರ್ತಿ ಅನಿತಾ ಸುಮಂತ್ ಹೀಗೆ ಹೇಳಿದ್ದಾರೆ - "ಜಾತಿಯ ಆಧಾರದಲ್ಲಿ ಅಸಮಾನತೆಗಳು ಈಗಿನ ಸಮಾಜದಲ್ಲಿದೆ ಎಂಬುದನ್ನು ಹಾಗೂ ಅವುಗಳನ್ನು ಬಿಟ್ಟುಬಿಡಬೇಕೆಂದು ಈ ಕೋರ್ಟ್ ಒಪ್ಪುತ್ತದೆ. ಆದರೆ ಜಾತಿ ವ್ಯವಸ್ಥೆಯ ಆರಂಭ ನಮಗೆ ಈಗ ತಿಳಿದಂತೆ, ಒಂದು ಶತಮಾನಕ್ಕೂ ಕಡಿಮೆ ಸಮಯದ ಹಿಂದೆ ಆಗಿದೆ," ಎಂದು ಹೇಳಿದ್ದರು.
ಆದರೆ ಮದ್ರಾಸ್ ಹೈಕೋರ್ಟ್‌ನ ವೆಬ್‌ಸೈಟ್‌ನಲ್ಲಿ ಈಗ ಲಭ್ಯವಿರುವ ತೀರ್ಪಿನ ಪ್ರತಿಯಲ್ಲಿ ನ್ಯಾಯಮೂರ್ತಿ ಅನಿತಾ ಹೇಳಿರುವುದು ಹೀಗೆ ಎಂದು ದಾಖಲಾಗಿದೆ. - "ಜಾತಿಯ ಆಧಾರದಲ್ಲಿ ಸಮಾಜದಲ್ಲಿ ಅಸಮಾನತೆಗಳು ಈಗಿನ ಸಮಾಜದಲ್ಲಿದೆ ಎಂಬುದನ್ನು ಹಾಗೂ ಅವುಗಳನ್ನು ಬಿಟ್ಟುಬಿಡಬೇಕೆಂದು ಈ ಕೋರ್ಟ್ ಒಪ್ಪುತ್ತದೆ. ಆದರೆ ನಮಗೆ ಇಂದು ತಿಳಿದಂತೆ ಜಾತಿಗಳ ವರ್ಗೀಕರಣ ತೀರಾ ಇತ್ತೀಚಿನದು ಮತ್ತು ಆಧುನಿಕ ವಿಚಾರ…"