ಚೆನ್ನೈ: ವಾಟ್ಸಾಪ್ ಮೂಲಕ ಡೆತ್ ನೋಟಿಸ್ ಮೇಲೆ(ಸಾವಿನ ಸುದ್ದಿ) ಥಂಬ್ ಎಮೋಜಿ ಹಾಕುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಮದ್ರಾಸ್ ಹೈಕೋರ್ಟ್ ತೀರ್ಪು ನೀಡಿದೆ. ಅಂತಹ ಥಂಬ್ ಎಮೋಜಿಯನ್ನು ಸರಿಯಾದ ಅರ್ಥದಲ್ಲಿ ನೋಡಬೇಕು ಎಂದು ನ್ಯಾಯಾಲಯ ಹೇಳಿದೆ.
ಮೇಲಧಿಕಾರಿಯನ್ನು ಹತ್ಯೆ ಮಾಡಲಾಗುವುದೆಂಬ ವಾಟ್ಸ್ಆ್ಯಪ್ ಸಂದೇಶಕ್ಕೆ ಪ್ರತಿಕ್ರಿಯಿಸಿದ್ದಕ್ಕಾಗಿ ಅಮಾನತುಗೊಂಡಿದ್ದ ಆರ್‍ಪಿಎಫ್ ಕಾನ್ಸ್‍ಟೇಬಲ್‍ಗೆ ಮರುನೇಮಕ ನೀಡಬೇಕೆಂಬ ಏಕಸದಸ್ಯ ಪೀಠದ ಆದೇಶವನ್ನು ಮಧುರೈ ಹೈಕೋರ್ಟ್ ಪೀಠ ಎತ್ತಿ ಹಿಡಿದಿದೆ. ಥಂಬ್ ಎಮೋಜಿಯೊಂದಿಗೆ ಸಾವನ್ನು ಸಂಭ್ರಮಿಸಲಾಗಿದೆ ಎಂದು ತಿಳಿಯಲಾಗದು ಎಂದು ನ್ಯಾಯಮೂರ್ತಿಗಳಾದ ಡಿ.ಕೃಷ್ಣಕುಮಾರ್, ಆರ್. ವಿಜಯಕುಮಾರ್ ಅವರನ್ನೊಳಗೊಂಡ ಪೀಠ ಹೇಳಿದೆ.
2018 ರಲ್ಲಿ, ಮೇಘಾಲಯದಲ್ಲಿ ಉನ್ನತ ಆರ್‍ಪಿಎಫ್ ಅಧಿಕಾರಿಯ ಹತ್ಯೆಯ ಸುದ್ದಿ ಗುಂಪಿಗೆ ಬಂದಾಗ, ತಕ್ಷಣವೇ ಪ್ರತಿಕ್ರಿಯಿಸಿದ ಕಾನ್‍ಸ್ಟೆಬಲ್ ನರೇಂದ್ರ ಚೌಹಾಣ್ ಅವರನ್ನು ಕೆಲಸದಿಂದ ತೆಗೆದುಹಾಕಲಾಯಿತು. ನಂತರ ಅವರು ನ್ಯಾಯಾಲಯದ ಮೊರೆ ಹೋಗಿದ್ದರು.