ಕಾಸರಗೊಡು: ಇವಿಎಂ ಮತ್ತು ವಿವಿಪ್ಯಾಟ್ ಯಂತ್ರಗಳ ಮೊದಲ ಹಂತದ ರ್ಯಾಂಡಮೈಸೇಶನ್ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಜರುಗಿತು. ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಕೆ.ಇನ್‍ಬಾಶೇಖರ್ ಅಧ್ಯಕ್ಷತೆ ವಹಿಸಿದ್ದರು. ಇವಿಎಂ ಮ್ಯಾನೇಜ್‍ಮೆಂಟ್ ಸಿಸ್ಟಂ ಅಪ್ಲಿಕೇಶನ್ ಬಳಸಿ ಮೊದಲ ಹಂತದ ತಪಾಸಣೆ ನಡೆಸಿದ ಯಂತ್ರಗಳು ಮತ್ತು ವಿವಿ ಪ್ಯಾಟ್‍ಗಳನ್ನು ಪರಿಶೀಲನೆ ನಡೆಸಲಾಯಿತು.
ಪರಿಶೀಲಿಸಲಾದ 50 ಯಂತ್ರಗಳನ್ನು ಹೊರತುಪಡಿಸಿ, 1480 ಇವಿಎಂ ಯಂತ್ರಗಳು, ನಿಯಂತ್ರಣ ಘಟಕದಲ್ಲಿನ 1228 ಇವಿಎಂ ಯಂತ್ರಗಳು ಮತ್ತು 1589 ವಿವಿ ಪ್ಯಾಟ್‍ಗಳಲ್ಲಿ ರ್ಯಾಂಡಮೈಸೇಶನ್ ಮಾಡಲಾಗಿದೆ. ಶೇ.20 ಇವಿಎಂಗಳು ಮತ್ತು ಶೇ. 30 ವಿವಿಪ್ಯಾಟ್‍ಗಳನ್ನು ಹೆಚ್ಚುವರಿಯಾಗಿ ಮೀಸಲಿಡಲಾಗುತ್ತದೆ.
ರ್ಯಾಂಡಮೈಸೇಶನ್ ಮೂಲಕ ಮಂಜೇಶ್ವರಂ ಕ್ಷೇತ್ರದಲ್ಲಿ 246 ಮತಯಂತ್ರಗಳು ಮತ್ತು 266 ವಿವಿಪ್ಯಾಟ್‍ಗಳನ್ನು ವಿತರಿಸಲಾಗಿದೆ. ಕಾಸರಗೋಡು ಕ್ಷೇತ್ರದಲ್ಲಿ 228 ಮತಯಂತ್ರ ಹಾಗೂ 247 ವಿವಿಪ್ಯಾಟ್, ಉದುಮ ಕ್ಷೇತ್ರದಲ್ಲಿ 237 ಮತಯಂತ್ರ ಹಾಗೂ 257 ವಿವಿಪ್ಯಾಟ್, ಕಾಞಂಗಾಡು ಕ್ಷೇತ್ರದಲ್ಲಿ 235 ಮತ ಯಂತ್ರಗಳು ಮತ್ತು 254 ವಿವಿಪ್ಯಾಟ್, ತ್ರಿಕರಿಪುರ ಕ್ಷೇತ್ರದಲ್ಲಿ 232 ಮತ ಯಂತ್ರಗಳು ಮತ್ತು 252 ವಿವಿಪ್ಯಾಟ್‍ಗಳನ್ನು ವಿತರಿಸಲಾಗಿದೆ.
ಕಾಸರಗೋಡು ಕಲೆಕ್ಟರೇಟ್ ಮಿನಿ ಕಾನ್ಫರೆನ್ಸ್ ಸಭಾಂಗಣದಲ್ಲಿ ನಡೆದ ರ್ಯಾಂಡಮೈಸೇಶನ್ ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಸುಫಿಯಾನ್ ಅಹಮದ್ ಮತ್ತು ಚುನಾವಣಾ ಜಿಲ್ಲಾಧಿಕಾರಿ ಪಿ.ಅಖಿಲ್, ರಾಜಕೀಯ ಪಕ್ಷದ ಪ್ರತಿನಿಧಿಗಳು ಉಪಸ್ಥಿತರಿದ್ದರು.