ಮಂಜೇಶ್ವರ: ಕೇರಳ ಪ್ರಾಂತ್ಯ ಸರ್ಕಾರಿ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಸಂಘಟನೆ –(ಕೆ.ಜಿ.ಪಿ.ಯಸ್.ಯಚ್.ಎ) ಮಂಜೇಶ್ವರ ಘಟಕದ ವತಿಯಿಂದ ಸೇವೆಯಿಂದ ನಿವೃತ್ತರಾಗುತ್ತಿರುವ ಮುಖ್ಯ ಶಿಕ್ಷಕರ ವಿದಾಯಕೂಟ ಮಂಜೇಶ್ವರ ಸರ್ಕಾರಿ ಕ್ಷೇಮಾಭಿವೃದ್ಧಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.
ಮಂಜೇಶ್ವರ ಗ್ರಾಮ ಪಂಚಾಯತಿ ಅಧ್ಯಕ್ಷೆ ಜೀನ್ ಲವೀನ ಮೋಂತೇರೋ ಉದ್ಘಾಟಿಸಿದರು. ಕೆ.ಜಿ.ಪಿ.ಯಸ್.ಯಚ್.ಎ ಮಂಜೇಶ್ವರ ಘಟಕದ ಅಧ್ಯಕ್ಷ ಪದ್ಮನಾಭ.ಯಂ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಮಂಜೇಶ್ವರ ಉಪಜಿಲ್ಲಾ ಶಿಕ್ಷಣಾಧಿಕಾರಿ ಕೃಷ್ಣಮೂರ್ತಿ ಯಂ.ಯಸ್, ಸಂಘಟನೆಯ ರಾಜ್ಯ ನಿಕಟಪೂರ್ವ ಉಪಾಧ್ಯಕ್ಷ ಸುರೇಂದ್ರನ್ ಜಿಲ್ಲಾ ಕಾರ್ಯದರ್ಶಿ ವತ್ಸಲನ್ ಮಂಜೇಶ್ವರ, ಉಪಜಿಲ್ಲಾ ಮುಖ್ಯೋಪಾಧ್ಯಾಯ ಸಂಘದ ಕಾರ್ಯದರ್ಶಿ ಶ್ಯಾಮ ಭಟ್ ಉಪಸ್ಥಿತರಿದ್ದು ಶುಭ ಹಾರೈಸಿದರು.
ಪ್ರಸ್ತುತ ಶ್ಯೆಕ್ಷಣಿಕ ವರ್ಷದಲ್ಲಿ ಸೇವೆಯಿಂದ ನಿವೃತ್ತಿಗೊಳ್ಳುತ್ತಿರುವ ಉಪಜಿಲ್ಲಾ ಶಿಕ್ಷಣಾಧಿಕಾರಿ ಕೃಷ್ಣಮೂರ್ತಿಯಂ.ಎಸ್, ಸಂಘದ ರಾಜ್ಯ ನಿಕಟಪೂರ್ವ ಉಪಾಧ್ಯಕ್ಷ ಸುರೇಂದ್ರನ್, ಜಿ.ಬಿ.ಎಲ್.ಪಿ. ಶಾಲೆಯ ಮುಖ್ಯ ಶಿಕ್ಷಕಿ ಶಾಲಿನಿ ಜಿ ಐಲ, ಬಡಾಜೆ ಜಿ.ಎಲ್.ಪಿ. ಶಾಲೆಯ ಮುಖ್ಯ ಶಿಕ್ಷಕಿ ಪದ್ಮಾವತಿ ಯಂ, ಆರಿಕ್ಕಾಡಿ ಜಿ.ಯಂ.ಎಲ್.ಪಿ ಶಾಲೆಯ ಮುಖ್ಯ ಶಿಕ್ಷಕ ಅಬ್ದುಲ್ಲ ಕುಞ್ಞ ಮೊದಲಾದವರನ್ನು ಶಾಲು ಹೊದಿಸಿ ಫಲಪುಷ್ಪ, ಪೇಟ ನೀಡಿ ಸನ್ಮಾನ ಪತ್ರ ಹಾಗೂ ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು. ಸಂಘಟನೆಯ ಮಂಜೇಶ್ವರ ಘಟಕದ ಕಾರ್ಯದರ್ಶಿ ಚಿತ್ರಾವತಿ ಯಂ ಚಿಗುರುಪಾದೆ ಸ್ವಾಗತಿಸಿ, ಮಂಜೇಶ್ವರ ಘಟಕದ ನಿಕಟಪೂರ್ವ ಅಧ್ಯಕ್ಷ ಸುಕೇಶ.ಎ ವಂದಿಸಿದರು. ಸಂಘಟನೆಯ ಜೊತೆಕಾರ್ಯದರ್ಶಿ ಹರಿಣಾಕ್ಷಿ ನಿರೂಪಿಸಿದರು. ಸಂಘಟನೆಯ ರಾಜ್ಯ ಹಾಗೂ ಜಿಲ್ಲಾ ಪ್ರತಿನಿಧಿಗಳು ಉಪಸ್ಥಿತರಿದ್ದರು.