ತಿರುವನಂತಪುರಂ: ಕೇರಳ ವಿಶ್ವವಿದ್ಯಾನಿಲಯದ ಕಲೋತ್ಸವವನ್ನು ನಿಲ್ಲಿಸುವಂತೆ ಉಪಕುಲಪತಿ ಡಾ.ಮೋಹನ್ ಕುನ್ನುಮ್ಮಾಲ್ ಸೂಚನೆ ನೀಡಿದ್ದಾರೆ. ಇನ್ನು ಸ್ಪರ್ಧೆಗಳು ಇರುವುದಿಲ್ಲ. ಹಿಂದಿನ ಸ್ಪರ್ಧೆಗಳ ಫಲಿತಾಂಶಗಳ ಪ್ರಕಟಣೆ ಇರುವುದಿಲ್ಲ.ಜೊತೆಗೆ ಸಮಾರೋಪವೂ ಇರುವುದಿಲ್ಲ.
ಕಲೋತ್ಸವದ ಸಮಾರೋಪ ಸಮಾರಂಭ ಇರುವುದಿಲ್ಲ ಎಂದು ವಿಶ್ವವಿದ್ಯಾಲಯದ ಅಧಿಕಾರಿಗಳು ತಿಳಿಸಿದ್ದಾರೆ. ಉತ್ಸವಕ್ಕೆ ಸಂಬಂಧಿಸಿದಂತೆ ಬಂದಿರುವ ಎಲ್ಲಾ ದೂರುಗಳನ್ನು ಪರಿಶೀಲಿಸಿದ ನಂತರವೇ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಅಧಿಕಾರಿಗಳು ಸ್ಪಷ್ಟ್ಟಪಡಿಸಿದ್ದಾರೆ.
ಈ ನಡುವೆ ಕಲೋತ್ಸವದ ವೇಳೆ ಉಂಟಾದ ಸಂಘರ್ಷದಲ್ಲಿ ಎಸ್‍ಎಫ್‍ಐ-ಕೆಎಸ್‍ಯು ಕಾರ್ಯಕರ್ತರ ವಿರುದ್ಧ ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕೆಎಸ್‍ಯು ಕಾರ್ಯಕರ್ತರನ್ನು ಥಳಿಸಿದ ಎಸ್‍ಎಫ್‍ಐ ಕಾರ್ಯಕರ್ತರ ವಿರುದ್ಧ ಎರಡು ಪ್ರಕರಣಗಳನ್ನು ದಾಖಲಿಸಲಾಗಿದೆ. ಎಸ್‍ಎಫ್‍ಐ ಜಿಲ್ಲಾ ಪದಾಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಕಲೋತ್ಸವಕ್ಕೆ ನುಗ್ಗಿ ದಾಂಧಲೆ ಸೃಷ್ಟಿಸಿದ ಕೆಎಸ್‍ಯು ಕಾರ್ಯಕರ್ತರ ವಿರುದ್ಧವೂ ಪ್ರಕರಣ ದಾಖಲಾಗಿದೆ.