ಕೋಲ್ಕತ್ತ: ಎರಡು ದಿನಗಳ ಹಿಂದೆ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ(ಟಿಎಂಸಿ) ರಾಜೀನಾಮೆ ನೀಡಿದ್ದ ತಪಸ್ ರಾಯ್ ಇಂದು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.
ಕೋಲ್ಕತ್ತ: ಎರಡು ದಿನಗಳ ಹಿಂದೆ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ(ಟಿಎಂಸಿ) ರಾಜೀನಾಮೆ ನೀಡಿದ್ದ ತಪಸ್ ರಾಯ್ ಇಂದು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.
ಟಿಎಂಸಿಯಿಂದ ಆಯ್ಕೆಯಾಗಿದ್ದ ಅವರು, ಪಕ್ಷದ ನಾಯಕತ್ವದ ವಿರುದ್ಧ ಅಸಮಾಧಾನಗೊಂಡು ಸೋಮವಾರ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸುಕಂತ ಮಜುಂದಾರ್, ಸುವೆಂದು ಅಧಿಕಾರಿ ಅವರಿಂದ ಬಿಜೆಪಿ ಪಕ್ಷದ ಧ್ವಜ ಸ್ವೀಕರಿಸಿ ಮಾತನಾಡಿದ ಅವರು, 'ನಾನು ಇಂದು ಬಿಜೆಪಿ ಪಕ್ಷವನ್ನು ಸೇರಿದ್ದೇನೆ. ಟಿಎಂಸಿ ಪಕ್ಷದ ದುರಾಡಳಿತ ಮತ್ತು ದೌರ್ಜನ್ಯದ ವಿರುದ್ಧ ಹೋರಾಡಲು ಇಚ್ಛಿಸುತ್ತೇನೆ ಎಂದು ಹೇಳಿದ್ದಾರೆ.
ತಮ್ಮ ವೈಯಕ್ತಿಕ ಲಾಭಕ್ಕಾಗಿ ರಾಯ್, ತಮ್ಮ ತತ್ವ ಮತ್ತು ಸಿದ್ಧಾಂತಗಳನ್ನು ಮರೆತಿದ್ದಾರೆ ಎಂದು ಟಿಎಂಸಿ ಟೀಕಿಸಿದೆ.
'ತಪಸ್ ರಾಯ್ ರೀತಿಯ ದ್ರೋಹಿಗಳನ್ನು ಪಶ್ಚಿಮ ಬಂಗಾಳದ ಜನ ಕ್ಷಮಿಸುವುದಿಲ್ಲ' ಎಂದು ಟಿಎಂಸಿ ನಾಯಕ ಸಂತನು ಸೇನ್ ಹೇಳಿದ್ದಾರೆ.
ಟಿಎಂಸಿ ಮತ್ತು ಪಕ್ಷದ ವರಿಷ್ಠೆ ಮಮತಾ ಬ್ಯಾನರ್ಜಿ ವಿರುದ್ಧ ವಾಗ್ದಾಳಿ ನಡೆಸಿರುವ ರಾಯ್, ಪುರಸಭೆಯ ನೇಮಕಾತಿ ಅಕ್ರಮ ಆರೋಪದಲ್ಲಿ ನನ್ನ ಮನೆ ಮೇಲೆ ನಡೆದ ಇ.ಡಿ ದಾಳಿ ಸಂದರ್ಭ ಪಕ್ಷದಿಂದ ನನಗೆ ನೆರವು ಸಿಗಲಿಲ್ಲ. ಸಂಕಷ್ಟದ ಸಂದರ್ಭಗಳಲ್ಲಿ ನನ್ನ ಕೈಬಿಡಲಾಗಿತ್ತು ಎಂದು ದೂರಿದ್ದಾರೆ.