HEALTH TIPS

ಸಮಂ ಸಾಂಸ್ಕøತಿಕೋತ್ಸವ ಸಮಾರೋಪ

                   ಕಾಸರಗೋಡು: ಮಹಿಳಾ ಸಬಲೀಕರಣ, ಮಹಿಳಾ ಸಾಕ್ಷರತೆ ಮತ್ತು ಮಹಿಳಾ ಶಿಕ್ಷಣದ ವಿಷಯದಲ್ಲಿ ಕೇರಳ ದೇಶದಲ್ಲೇ ಮುಂಚೂಣಿಯಲ್ಲಿರುವುದಾಗಿ ಉನ್ನತ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ. ಆರ್ ಬಿಂದು ತಿಳಿಸಿದ್ದಾರೆ.

                   ಅವರು ಕಾಞಂಗಾಡಿನಲ್ಲಿ ನಡೆದ ಸಮಂ ಸಾಂಸ್ಕøತಿಕ ಉತ್ಸವದ ಸಮಾರೋಪ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಸಮಂ ಸಂಘಟನೆಯನ್ನು ಸ್ಪಷ್ಟ ವಿಚಾರಧಾರೆಯೊಂದಿಗೆ ಅಳವಡಿಸಲಾಗಿದೆ.  ಕೇರಳದಲ್ಲಿ ಸಾಮಾಜಿಕ ಕ್ರಿಯಾಶೀಲತೆಯನ್ನು ಸಾಧಿಸಲು ಸಾಧ್ಯವಾಗಿದ್ದು,  ಇಲ್ಲಿನ ಮಹಿಳಾ ಸಬಲೀಕರಣಕ್ಕೆ ಕುಟುಂಬಶ್ರೀ ಉತ್ತಮ ಉದಾಹರಣೆಯಾಗಿದೆ.  

              ಮಹಿಳಾ ಸಬಲೀಕರಣದ ವಿಷಯದಲ್ಲಿ ನಾವು ಇನ್ನಷ್ಟು ದಊರ ಸಾಗಬೇಕಾಗಿದೆ.  ಸಾರ್ವಜನಿಕ ಸ್ಥಳಗಳು ಇನ್ನೂ ಸ್ತ್ರೀ ಸ್ನೇಹಿಯಾಗಿದೆಯೇ ಎಂಬುದಕ್ಕೆ ಉತ್ತರ ಲಭಿಸಿಲ್ಲ. ದೇಶದ ಇತರ ರಾಜ್ಯಗಳಿಗೆ ಹೋಲಿಸಿದರೆ, ಕೇರಳವು ಕೆಲವು ಪ್ರಾಜ್ವಲ್ಯಮಾನ ಚಿತ್ರಣಗಳಿಗೆ ಸಾಕ್ಷಿಯಾಗಿದ್ದು,  ಮಹಿಳೆಯರು ಪ್ರತೀಕಾತ್ಮತೆ ಮೈಗೂಡಿಸಿಕೊಲ್ಳಬೇಕಾದ ಅನಿವಾರ್ಯತೆಯಿದೆ ಎಂದು ತಿಳಿಸಿದರು. ಶಾಸಕ ಇ. ಚಂದ್ರಶೇಖರನ್ ಶಾಸಕ ಅಧ್ಯಕ್ಷತೆ ವಹಿಸಿದ್ದರು.

             ಜಿಲ್ಲಾ ಪಂಚಾಯಿತಿ ಸದಸ್ಯ ಸಿ.ಜೆ.ಸಜಿತ್ ಸಮಂ ಪ್ರಶಸ್ತಿ ಪುರಸ್ಕøತರನ್ನು ಪರಿಚಯಿಸಿದರು. ಸಾಹಿತ್ಯಕ್ಕಾಗಿ ಬಿಂದು ಮರಂUಙËಡ್, ಕಲೆ- ಸಿ.ಪಿ.ಶುಭಾ, ಶಿಕ್ಷಣ- ಭಾರ್ಗವಿ ಕುಟ್ಟಿ ಕೋರೋತ್, ಸಮಾಜಸೇವೆ- ಎಂ.ಲಕ್ಷ್ಮಿ, ಕೃಷಿ- ಮುಮ್ತಾಜ್ ಅಬ್ದುಲ್ಲಾ, ಆರೋಗ್ಯ- ಡಾ. ರಾಜಿ ರಾಜನ್, ತುಳು ಚಲನಚಿತ್ರ-ರೂಪಾ ವರ್ಕಾಡಿ, ಮಹಿಳಾ ಉದ್ಯಮಿ-ಮಲ್ಲಿಕಾ ಗೋಪಾಲ್, ಅನಿವಾಸಿ ಉದ್ಯಮಿ-ನಜಿಲಾ ಮಹಮ್ಮದ್ ಸಿಯಾದ್, ವಿಕಲಚೇತನ-ಪಿ. ಆರ್ ವೃಂದಾ ಮತ್ತು ಸಂಗೀತ-ಆರ್ ಎಲ್ ವಿ ಚಾರುಲತಾ ಅವರಿಗೆ ಸಚಿವರು ಪ್ರಶಸ್ತಿ ವಿತರಿಸಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries