ಪಾಲಕ್ಕಾಡ್: ಆರ್‍ಎಸ್‍ಎಸ್ ಮುಖಂಡ ಎ. ಶ್ರೀನಿವಾಸನ್ (45) ಹತ್ಯೆ ಪ್ರಕರಣದಲ್ಲಿ ಪರಾರಿಯಾಗಿದ್ದ ಪಿಎಫ್‍ಐ ಭಯೋತ್ಪಾದಕನನ್ನು ಬಂಧಿಸಲಾಗಿದೆ.
ಪ್ರಕರಣದ ಪ್ರಮುಖ ಆರೋಪಿ ಮಲಪ್ಪುರಂ ನಿವಾಸಿ ಶೇಫೀಕ್ ಬಂಧಿತ ಆರೋಪಿ. ಎನ್‍ಐಎ ನಡೆಸಿದ ತನಿಖೆಯ ವೇಳೆ ಆರೋಪಿಯನ್ನು ಕೊಲ್ಲಂನಲ್ಲಿ ಬಂಧಿಸಲಾಗಿದೆ. ಶೆಫಿಕ್ ಪಾಪ್ಯುಲರ್ ಫ್ರಂಟ್ ನ ಹಿಟ್ ಸ್ಕ್ವಾಡ್ ನ ಸದಸ್ಯನಾಗಿದ್ದ ಎಂದು ಎನ್ ಐಎ ಹೇಳಿದೆ. ಶ್ರೀನಿವಾಸನ್ ಹತ್ಯೆ ಪ್ರಕರಣದ ಬಳಿಕ ಆತ ತಲೆಮರೆಸಿಕೊಂಡಿದ್ದ.
ಏಪ್ರಿಲ್ 16, 2022 ರಂದು, ಶ್ರೀನಿವಾಸನ್ ಅವರನ್ನು ಪಾಪ್ಯುಲರ್ ಫ್ರಂಟ್ ಗುಂಪು ಹತ್ಯೆ ಮಾಡಿತ್ತು. ಪಾಲಕ್ಕಾಡ್ ನ ಅಂಗಡಿಯಲ್ಲಿ ಮಾರಕಾಯುಧಗಳನ್ನು ಹೊಂದಿದ್ದ ತಂಡವೊಂದು ಶ್ರೀನಿವಾಸನ್ ಅವರನ್ನು ಕೊಂದಿತ್ತು. ಮೂರು ಬೈಕ್‍ಗಳಲ್ಲಿ ಬಂದ ಆರು ಮಂದಿಯ ತಂಡ ಹಗಲು ಹೊತ್ತಿನಲ್ಲಿ ನಗರ ಕೇಂದ್ರದಲ್ಲಿ ದಾಳಿ ನಡೆಸಿತ್ತು.
ಆರಂಭದಲ್ಲಿ ಸ್ಥಳೀಯ ಪೆÇಲೀಸರ ವಿಶೇಷ ತಂಡದಿಂದ ತನಿಖೆ ನಡೆಸಲಾಗಿದ್ದ ಶ್ರೀನಿವಾಸನ್ ಹತ್ಯೆ ಪ್ರಕರಣವನ್ನು ನಂತರ ಎನ್‍ಐಎ ಕೈಗೆತ್ತಿಕೊಂಡಿತ್ತು.