ಕಾಸರಗೋಡು: ರಿಯಾಝ್ ಮೌಲವಿ ಹತ್ಯೆ ಪ್ರಕರಣದ ಮೂವರು ಆರೋಪಿಗಳನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಕಾಸರಗೋಡು ಜಿಲ್ಲಾ ಪ್ರಧಾನ ಸೆಷನ್ಸ್ ನ್ಯಾಯಾಲಯದ ತೀರ್ಪು ನೀಡಿದೆ.
ಕೇಳುಗುಡ್ಡೆಯ ಅಜೇಶ್, ನಿತಿನ್ ಕುಮಾರ್ ಮತ್ತು ಅಖಿಲೇಶ್ ಅವರನ್ನು ಖುಲಾಸೆಗೊಳಿಸಲಾಗಿದೆ. ಕೊಲೆಯಲ್ಲಿ ಆರೋಪಿಗಳ ಪಾತ್ರವನ್ನು ಸಾಬೀತುಪಡಿಸಲು ಸಾಧ್ಯವಾಗಿಲ್ಲ ಎಂದು ನ್ಯಾಯಾಲಯ ಹೇಳಿದೆ.
ಘಟನೆ ನಡೆದು ಏಳು ವರ್ಷಗಳ ಬಳಿಕ ಈ ತೀರ್ಪು ಪ್ರಕಟಿಸಲಾಗಿದೆ. ಈ ಅವಧಿಯಲ್ಲಿ ಅವರಿಗೆ ಜಾಮೀನು ಸಿಕ್ಕಿರಲಿಲ್ಲ. ಜಿಲ್ಲಾ ಪ್ರಧಾನ ಸತ್ರ ನ್ಯಾಯಾಲಯದ ನ್ಯಾಯಾಧೀಶ ಕೆ.ಕೆ.ಬಾಲಕೃಷ್ಣನ್ ಪ್ರಕರಣದ ವಿಚಾರಣೆ ನಡೆಸಿದ್ದರು. ಕೆಕೆ ಬಾಲಕೃಷ್ಣನ್ ಅವರು ಈ ಪ್ರಕರಣದ ವಿಚಾರಣೆ ನಡೆಸುತ್ತಿರುವ ಎಂಟನೇ ನ್ಯಾಯಾಧೀಶರಾಗಿದ್ದಾರೆ. ತೀರ್ಪಿನ ಹಿನ್ನೆಲೆಯಲ್ಲಿ ನ್ಯಾಯಾಲಯದ ಆವರಣದಲ್ಲಿ ಜನಸಾಗರವೇ ನೆರೆದಿತ್ತು. ಎಲ್ಲರನ್ನೂ ಖುಲಾಸೆಗೊಳಿಸಲಾಗಿದೆ ಎಂದು ಒಂದು ಸಾಲಿನ ಹೇಳಿಕೆ ನೀಡಿ ಕೋರ್ಟ್ ಆದೇಶ ನೀಡಿದೆ.
ಸಿಪಿಎಂ, ಕಾಂಗ್ರೆಸ್ ಮತ್ತು ಮುಸ್ಲಿಂ ಲೀಗ್ ಸೇರಿದಂತೆ ಸಂಘಟನೆಗಳು ರಿಯಾಜ್ ಮೌಲ್ವಿ ಹತ್ಯೆಯನ್ನು ಆರೆಸ್ಸೆಸ್ ಮತ್ತು ಬಿಜೆಪಿ ಮೇಲೆ ಬಿಂಬಿಸಿ ಕೋಮು ಸಂಘರ್ಷ ಸೃಷ್ಟಿಸಿ ರಾಜಕೀಯ ಲಾಭ ಪಡೆಯಲು ಸಾಕಷ್ಟು ಪ್ರಯತ್ನ ನಡೆಸಿದ್ದವು. ಚೂರಿ ಮದ್ರಸದಲ್ಲಿ ಶಿಕ್ಷಕರಾಗಿದ್ದ ಮೂಲತಃ ಕೊಡಗು ನಿವಾಸಿಯಾದ ಮೊಹಮ್ಮದ್ ರಿಯಾಝ್ ಮೌಲವಿ ಅವರನ್ನು 2017ರ ಮಾರ್ಚ್ 20ರಂದು ಹತ್ಯೆ ಮಾಡಲಾಗಿತ್ತು. ಮಸೀದಿಯ ಒಳಗಿನ ಕೊಠಡಿಯಲ್ಲಿ ಮಲಗಿದ್ದ ರಿಯಾಝ್ ಅವರ ಬಳಿ ಅತಿಕ್ರಮ ಪ್ರವೇಶ ಮಾಡಿ ಮೌಲ್ವಿಯ ಕತ್ತು ಸೀಳಿ ಕೊಲೆ ಮಾಡಿರುವುದು ಪ್ರಕರಣವಾಗಿತ್ತು.
ಆರೋಪಿಗಳು ಕೋಮುಗಲಭೆ ಸೃಷ್ಟಿಸುವ ಉದ್ದೇಶದಿಂದ ಕೊಲೆ ಮಾಡಿದ್ದಾರೆ ಎಂದು ತನಿಖಾ ತಂಡ ನ್ಯಾಯಾಲಯಕ್ಕೆ ಸಲ್ಲಿಸಿರುವ ಚಾರ್ಜ್ ಶೀಟ್ ನಲ್ಲಿ ತಿಳಿಸಿತ್ತು. ಈ ಹಿಂದೆ ರಾಜ್ಯ ಅಲ್ಪಸಂಖ್ಯಾತ ಆಯೋಗವು ಪ್ರಕರಣದ ಪಿತೂರಿ ತನಿಖೆಗೆ ಸಲ್ಲಿಸಿದ್ದ ಮನವಿಯನ್ನು ತಿರಸ್ಕ್ಕರಿಸಿತ್ತು. ರಿಯಾಜ್ ಮೌಲ್ವಿ ಹತ್ಯೆ ಕುಡಿತದ ಹಿನ್ನೆಲೆಯ ಕೃತ್ಯವಾಗಿದ್ದು, ಬೇರೆ ಯಾವುದೇ ಸಂಚು ನಡೆದಿಲ್ಲ ಎಂಬುದಕ್ಕೆ ರಾಜ್ಯ ಅಪರಾಧ ವಿಭಾಗದ ವರದಿ ಹಾಗೂ ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿದ ಅಲ್ಪಸಂಖ್ಯಾತ ಆಯೋಗ ಸಂಚು ತನಿಖೆಗೆ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿತ್ತು. ಈ ಕ್ರಮದ ಮೂಲಕ ರಿಯಾಜ್ ಮೌಲ್ವಿ ಹತ್ಯೆಗೂ ಆರೆಸ್ಸೆಸ್ ಅಥವಾ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ ಎಂಬುದು ಮತ್ತೊಮ್ಮೆ ಸ್ಪಷ್ಟವಾಗಿದೆ.