ಕಾಸರಗೋಡು: ಲೋಕಸಭಾ ಚುನಾವಣೆ ಅಂಗವಾಗಿ ಕಾಸರಗೋಡು ಜಿಲ್ಲೆಯ ಚುನಾವಣಾ ವೆಚ್ಚ ಪರಿವೀಕ್ಷಕರಾಗಿ ನೇಮಕಗೊಂಡಿರುವ ಆನಂದ್‍ರಾಜ್ ಕಾಸರಗೋಡಿಗೆ ಭೇಟಿ ನೀಡಿದರು. ಕಾಸರಗೋಡು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಯಾಗಿರುವ ಕೆ. ಇನ್‍ಬಾಶೇಖರ್ ಅವರು ಜಿಲ್ಲಾಧಿಕಾರಿ ಕಚೇರಿ ವಠಾರದಲ್ಲಿ ಆನಂದರಾಜ್ ಅವರನ್ನು ಬರಮಾಡಿಕೊಮಡರು. ಈ ಸಂದರ್ಭ ವೀಕ್ಷಕರೊಂದಿಗೆ ಚುನಾವಣಾ ಸಂಬಂಧಿತ ವಿಷಯಗಳ ಕುರಿತು ಜಿಲ್ಲಾಧಿಕಾರಿ ಚರ್ಚಿಸಿದರು. ಚುನಾವಣಾ ನಿರ್ವಹಣಾ ಯೋಜನೆಯನ್ನು ವೀಕ್ಷಕರಿಗೆ ಹಸ್ತಾಂತರಿಸಲಾಯಿತು. ಆನಂದ್‍ರಾಜ್ ಅವರು ಮುಂಬೈನ ಡೆಪ್ಯೂಟಿ ಕಮಿಷನರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಜಿಲ್ಲಾ ಚುನಾವಣಾ ಖರ್ಚುವೆಚ್ಚ ನಿರಿಕ್ಷಕರ ಅಧಿಕೃತ ಫೆÇೀನ್ ಸಂಖ್ಯೆ 80757 82574.