ಪಾಲಕ್ಕಾಡ್: ಮಾದರಿ ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದ ವಿದ್ಯಾರ್ಥಿಗೆ ಪಬ್ಲಿಕ್ ಪರೀಕ್ಷೆ ಬರೆಯಲು ಅವಕಾಶ ನೀಡಿಲ್ಲ ಎಂಬ ದೂರು ದಾಖಲಾಗಿದೆ. ಒಲವಕೋಡ್ ರೈಲ್ವೇ ಹೈಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿಗೆ ಪ್ಲಸ್ ಟು ಪರೀಕ್ಷೆ ಬರೆಯಲು ಅವಕಾಶ ನಿರಾಕರಿಸಲಾಗಿದೆ.
ವಿದ್ಯಾರ್ಥಿನಿ ಶಾಲೆಗೆ ಹೋದರೂ ಹಾಲ್ ಟಿಕೆಟ್ ನೀಡದೆ ವಾಪಸ್ ಕಳುಹಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಮಾದರಿ ಪರೀಕ್ಷೆಯಲ್ಲಿ ಅಂಕ ಕಡಿಮೆ ಇರುವುದರಿಂದ ಎಸ್ಇ(ಸೇ) ಪರೀಕ್ಷೆ ಬರೆದರೆ ಸಾಕು ಎಂದು ಶಿಕ್ಷಕರು ಹೇಳಿರುವುದಾಗಿಯೂ ವಿದ್ಯಾರ್ಥಿ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ವಿದ್ಯಾರ್ಥಿಗೆ ಪ್ಲಸ್ ಟು ಭೌತಶಾಸ್ತ್ರ ಪರೀಕ್ಷೆ ಬರೆಯಲು ಅವಕಾಶ ನಿರಾಕರಿಸಲಾಗಿದೆ. ವಿದ್ಯಾರ್ಥಿಯ ಪೋಷÀಕರು ಮುಖ್ಯಮಂತ್ರಿ ಹಾಗೂ ಶಿಕ್ಷಣ ಸಚಿವರಿಗೆ ದೂರು ಸಲ್ಲಿಸಿದ್ದಾರೆ.