HEALTH TIPS

ಹೆದ್ದಾರಿಯಲ್ಲಿ ವಾಯುಪಡೆ ವಿಮಾನಗಳನ್ನು ತುರ್ತು ಇಳಿಸುವ ಪ್ರಯೋಗ ಯಶಸ್ವಿ

             ಪಾಟ್ಲ : ರಾಷ್ಟ್ರೀಯ ಹೆದ್ದಾರಿಯಲ್ಲಿ ವಿಮಾನವನ್ನು ಇಳಿಸುವ ಪ್ರಯೋಗವನ್ನು ಭಾರತೀಯ ವಾಯುಪಡೆಯು ಯಶಸ್ವಿಯಾಗಿ ನಡೆಸಿದೆ. ಸೋಮವಾರ ಆಂಧ್ರ ಪ್ರದೇಶದ ಪುಚಿಕಲಗುಡಿಪಡು ಗ್ರಾಮದ ಬಳಿ ಇರುವ ರಾಷ್ಟ್ರೀಯ ಹೆದ್ದಾರಿ- 16ರಲ್ಲಿ ಎಎನ್‌- 32 ಮತ್ತು ಡಾರ್ನಿಯರ್‌ ಎಂಬ ಎರಡು ಸಾರಿಗೆ ವಿಮಾನಗಳನ್ನು ಯಶಸ್ವಿಯಾಗಿ ಲ್ಯಾಂಡ್‌ ಮಾಡುವ ಮೂಲಕ ಈ ಪ್ರಯೋಗ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

            ಮುಂಜಾನೆ 11 ಗಂಟೆಯಿಂದ ಮಧ್ಯಾಹ್ನ 1 ಗಂಟೆಯ ವರೆಗಿನ ಎರಡು ತಾಸಿನಲ್ಲಿ ಎರಡೂ ವಿಮಾನಗಳನ್ನು ಇಳಿಸಲಾಗಿದೆ. ಈ ಅವಧಿಯಲ್ಲಿ ಸುಖೋಯ್‌ ಎಸ್‌ಯು- 30 ಸೇರಿದಂತೆ ವಿವಿಧ ಯುದ್ಧ ವಿಮಾನಗಳೂ ಹಾರಾಟ ನಡೆಸಿದವು. ಹಾಗಿದ್ದರೂ ಅವುಗಳು ಸ್ಥಳದಲ್ಲಿ ಇಳಿದಿಲ್ಲ. ಈ ಪ್ರಯೋಗಕ್ಕಾಗಿ ಮುಂಜಾನೆ 7.30ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಹೆದ್ದಾರಿಯಲ್ಲಿ ವಾಹನಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು.

              ಭವಿಷ್ಯದಲ್ಲಿ ಯಾವುದೇ ತುರ್ತು ಪರಿಸ್ಥಿತಿಯನ್ನು ಎದುರಿಸಲು ಭಾರತೀಯ ವಾಯುಪಡೆಯ ತುರ್ತು ಸನ್ನದ್ಧತೆಯನ್ನು ಹೆಚ್ಚಿಸುವ ಭಾಗವಾಗಿ ಈ ಪ್ರಯೋಗ ನಡೆಸಲಾಗಿದೆ. ಯುದ್ಧದ ಸಂದರ್ಭದಲ್ಲಿ ವಿಮಾನವನ್ನು ತುರ್ತು ಇಳಿಸಲು ವಾಯುಪಡೆಗೆ ರಾಷ್ಟ್ರೀಯ ಹೆದ್ದಾರಿ- 16ರಲ್ಲಿ 4.1 ಕಿ.ಮೀ ಉದ್ದದ ಮಾರ್ಗದ ತುರ್ತು ಇಳಿಕೆ ಸೌಲಭ್ಯವಿರುತ್ತದೆ ಎಂದು ಸ್ಥಳೀಯ ಎಸ್‌ಪಿ ವಿಕುಲ್‌ ಜಿಂದಾಲ್‌ ತಿಳಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



Qries