ತ್ರಿಶೂರ್: ರಾಜ್ಯದ ಮತ್ತೆರಡು ಕಡೆಗಳಲ್ಲಿ ಕಾಡುಪ್ರಾಣಿಗಳ ದಾಳಿ ನಿನ್ನೆ ನಡೆದಿದೆ. ಪಾಲಿಪಿಲ್ಲಿ ಕುಂಡೈ ಪ್ರದೇಶದಲ್ಲಿ ಹುಲಿಯೊಂದು ಹಸುವನ್ನು ಕೊಂದಿದೆ. ಎರಡು ವಾರಗಳ ಹಿಂದೆ ದಾಳಿ ಮಾಡಿ ಗಾಯಗೊಳಿಸಿದ್ದ ಹಸುವನ್ನು ಈ ಬಾರಿ ಹುಲಿ ಕೊಂದು ಹಾಕಿದೆ.
ಕುಂದು ಮಹಮ್ಮದ್ ಅವರ ಹಸುವಿನ ಮೇಲೆ ಹುಲಿ ದಾಳಿ ಮಾಡಿ ಕೊಂದು ಹಾಕಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಹುಲಿ ದಾಳಿಯನ್ನು ಖಚಿತಪಡಿಸಿದ್ದಾರೆ. ಇಂತಹ ನಿರಂತರ ದಾಳಿಯಿಂದ ಸ್ಥಳೀಯರು ತೀವ್ರ ಭಯದಲ್ಲಿದ್ದಾರೆ.
ಇದೇ ವೇಳೆ ಕೋಝಿಕ್ಕೋಡ್ ಕುರ್ಯಾಡಿ ದನದ ಕೊಟ್ಟಿಗೆಯಲ್ಲಿ ರೈತನ ಸಾಕು ನಾಯಿಯನ್ನು ಹುಲಿ ಕೊಂದಿದೆ.. ಎಕಲ್ ಪ್ರದೇಶದಲ್ಲಿ ಕಾಂಜತ್ ಸಂತೋಷ್ ಎಂಬುವವರ ನಾಯಿಯನ್ನು ಹುಲಿ ಕೊಂದು ಹಾಕಿದೆ. ಮನೆಯ ಹಿಂದೆ ಕಟ್ಟಿದ್ದ ನಾಯಿಯನ್ನು ಕೊಂದು ಹಾಕಿದೆ. ದಾಳಿಯ ವೇಳೆ ಕುಟುಂಬ ಹೊರಗಡೆ ತೆರಳಿತ್ತು.
ಮಾರುತೊಂಕರ ಪಂಚಾಯಿತಿಯ ಏಕಲ್ ಪ್ರದೇಶದಲ್ಲಿ ಕಳೆದ ಶುಕ್ರವಾರ ರಾತ್ರಿ ಹುಲಿ ಕಾಣಿಸಿಕೊಂಡಿದ್ದು, ಸಾಕುಪ್ರಾಣಿಗಳನ್ನು ಹುಲಿಗಳು ಕೊಲ್ಲುತ್ತಿರುವ ಸುದ್ದಿ ಹರಡಿದ ನಂತರ ಸ್ಥಳೀಯರು ತೀವ್ರ ಭಯದಲ್ಲಿದ್ದಾರೆ. ಪಂಚಾಯತಿ ಹಾಗೂ ಅರಣ್ಯ ಇಲಾಖೆ ಎಚ್ಚರಿಕೆ ನೀಡಿದೆ.