ನಾವು ನಿತ್ಯ ಹಾಲನ್ನು ಒಂದಲ್ಲಾ ಒಂದು ಮಾರ್ಗದಲ್ಲಿ ಸೇವಿಸುತ್ತೇವೆ. ಟೀ, ಕಾಫಿಯಿಂದ ಹಿಡಿದು ಕೆಲವರು ಹಾಲನ್ನು ಸಕ್ಕರೆಯೊಂದಿಗೆ ಕುಡಿಯುತ್ತಾರೆ. ಹಾಲಿನಲ್ಲಿ ಅತ್ಯಧಿಕ ಕ್ಯಾಲ್ಸಿಯಂ ಅಂಶ ಹಾಗೂ ಹಲವು ವಿಟಮಿನ್‌ಗಳು ನಮಗೆ ಸಿಗುತ್ತದೆ. ಹೀಗಾಗಿ ಹಾಲು ನಮ್ಮ ಪೋಷಕಾಂಶ ಪೂರಿತ ಆಹಾರಗಳಲ್ಲಿ ಬಹುಮುಖ್ಯ ಅಂಶವಾಗಿದೆ.
ಅದರಲ್ಲೂ ಪಾಕೆಟ್ ಹಾಲು ಅಲ್ಲದೆ ಹಸುಗಳಿಂದ ಸಿಗುವ ಹಾಲನ್ನು ನೇರವಾಗಿ ಕುಡಿದರೆ ಅದರಿಂದ ಸಿಗುವ ಆರೋಗ್ಯಕರ ಅಂಶಗಳು ಮತ್ತಷ್ಟು ಹೆಚ್ಚಾಗುತ್ತದೆ. ಆದರೆ ಹಸುವಿನ ಹಾಲು ಹಳ್ಳಿಗಳಲ್ಲಿ ಮಾತ್ರ ಸಿಗುತ್ತಿದೆ. ನಗರಗಳಲ್ಲಿ ಎಲ್ಲರು ಪಾಕೆಟ್ ಮೂಲಕ ಸಿಗುವ ಹಾಲನ್ನೇ ಕುಡಿಯುವುದು ರೂಢಿಯಾಗಿದೆ.ಆದರೆ ನೀವು ಎಂದಾದರು ಯೋಚಿಸಿದ್ದೀರಾ? ಈ ಹಸುವಿನ ಹಾಲು ಪಾಕೆಟ್ ಹಾಲಿಗಿಂತಲೂ ಸ್ವಲ್ಪ ಹಳದಿ ಬಣ್ಣದಲ್ಲಿರುತ್ತದೆ. ಹೌದು ಹಸುವಿನ ಹಾಲು ನೋಡಲು ಹಳದಿ ಬಣ್ಣದಲ್ಲಿ ಕಾಣುತ್ತದೆ. ಹಾಗಾದರೆ ಹಸುವಿನ ಹಾಲಿನ ಬಣ್ಣ ಹಳದಿಯಾಗಿರಲು ಕಾರಣವೇನು? ಇದರಿಂದ ಏನಾದರೂ ಹಾನಿ ಇದೆಯೇ? ಈ ಕುರಿತ ಮಾಹಿತಿ ಇಲ್ಲಿದೆ ನೋಡಿ.
ಹಾಲು ಕ್ಯಾಲ್ಸಿಯಂ, ವಿಟಮಿನ್ ಬಿ ಮತ್ತು ಗಮನಾರ್ಹ ಪ್ರಮಾಣದ ವಿಟಮಿನ್ ಬಿ 2, ಕೊಬ್ಬಿನಲ್ಲಿ ಕರಗುವ ವಿಟಮಿನ್ ಎ, ಡಿ ಮತ್ತು ವಿಟಮಿನ್ ಇ ನಂತಹ ಪೋಷಕಾಂಶಗಳಲ್ಲಿ ಸಮೃದ್ಧವಾಗಿರುತ್ತದೆ. ಆದರೆ ಹಸುವಿನ ಹಾಲು ಹಳದಿಯಾಗಿರಲು ಕೆಲವು ಕಾರಣಗಳಿವೆ. ಇದಕ್ಕೆ ನ್ಯೂಜಿಲೆಂಡ್ ನ ಸಂಶೋಧಕರು ವಿವರಣೆ ನೀಡಿದ್ದಾರೆ. ಹಾಲಿನಲ್ಲಿ ಕ್ಯಾಲ್ಸಿಯಂ ಜೊತೆಗೆ ಪ್ರೋಟೀನ್ ಇರುತ್ತದೆ. ಹಸುವಿನ ಹಾಲನ್ನು ಹೊರತುಪಡಿಸಿ ಉಳಿದ ಹಾಲು ಬಿಳಿಯಾಗಿರುತ್ತದೆ ಏಕೆಂದರೆ ಅದರಲ್ಲಿ ಕ್ಯಾಸಿನ್ ಎಂಬ ಪ್ರೋಟೀನ್ ಇದೆ. ಆದರೆ ಹಸುವಿನ ಹಾಲಿನಲ್ಲಿ ಕ್ಯಾರೋಟಿನ್ ಎಂಬ ಪ್ರೊಟೀನ್ ಇರುತ್ತದೆ. ಅದಕ್ಕಾಗಿಯೇ ಹಸುವಿನ ಹಾಲು ಹಳದಿ ಬಣ್ಣದಿಂದ ಕೂಡಿರುತ್ತದೆ.
ಹಸುವಿನ ಹಾಲು ಹಳದಿಯಾಗಿರುವ ಅವುಗಳಿಗೆ ನೀಡುವ ಆಹಾರವು ಸಹ ಕಾರಣವಾಗಿರುತ್ತದೆ. ಹಸುಗಳು ಸಸ್ಯಹಾರಿಗಳಾಗಿರುವುದರಿಂದ ಸಸ್ಯಗಳಲ್ಲಿ ವಿಟಮಿನ್ ಎ ಇರುವುದಿಲ್ಲ. ಆದರೆ ಪ್ರೊ ವಿಟಮಿನ್ ಎಂಬ ಕ್ಯಾರೊಟುನಾಯ್ಡ್ ಅಂಶ ಇರುತ್ತದೆ. ಇದು ವಿಟಮಿನ್ ಎ ಆಗಿ ಪರಿವರ್ತನೆಗೊಳ್ಳುತ್ತದೆ. ಹಳದಿ ಬಣ್ಣಕ್ಕೆ ಕಾರಣವಾಗುವ ಅಂಶದಲ್ಲಿ ಇದು ಒಂದಾಗಿದೆ. ನೀವು ಹಳದಿ ಬಣ್ಣದ ಹಣ್ಣು ಅಥವಾ ತರಕಾರಿ ತೆಗೆದುಕೊಂಡರೆ ಅದರ ಬಣ್ಣಕ್ಕೆ ಈ ಕ್ಯಾರೊಟಿನಾಯ್ಡ್ ಎಂಬ ಅಂಶ ಕಾರಣವಾಗಿರುತ್ತದೆ. ಹೀಗಾಗಿ ಹಸುವಿನ ಹಾಲಿನ ಬಣ್ಣವು ಹಳದಿಯಾಗಿರಲು ಈ ಅಂಶ ಕಾರಣವಾಗಿರುತ್ತದೆ.
ಬೀಟಾ-ಕ್ಯಾರೋಟಿನ್ ನೈಸರ್ಗಿಕವಾಗಿ ಗಿಡಮೂಲಿಕೆಗಳು ಮತ್ತು ಹೂವುಗಳಲ್ಲಿ ಇರುತ್ತದೆ. ಇವುಗಳನ್ನು ಹಸುಗಳು ಸೇವಿಸುತ್ತವೆ. ಈ ಕ್ಯಾರೋಟಿನ್ ನಂತರ ಹಾಲಿನಲ್ಲಿ ಕೊಬ್ಬಿನಂತೆ ಶೇಖರಣೆಯಾಗುತ್ತದೆ. ಹಸುವಿನ ಹಾಲು ಶೇ.87ರಷ್ಟು ನೀರು ಮತ್ತು ಶೇ.13ರಷ್ಟು ದ್ರವವಾಗಿದೆ. ಅಲ್ಲದೆ, ಕೊಬ್ಬು, ಕ್ಯಾಲ್ಸಿಯಂ ಕಾಂಪ್ಲೆಕ್ಸ್, ಪ್ರೊಟೀನ್ ಕ್ಯಾಸಿನ್ ಮುಂತಾದ ವಿವಿಧ ಪದಾರ್ಥಗಳು ಬಣ್ಣಗಳನ್ನು ಹೀರಿಕೊಳ್ಳುವುದಿಲ್ಲ. ಹೀಗಾಗಿ ಹಾಲಿನಲ್ಲಿ ಹಳದಿ ಬಣ್ಣ ಹಾಗೆಯೆ ಕಾಣುತ್ತದೆ. ಆದರೆ ಪಾಕೆಟ್ ಹಾಲುಗಳನ್ನು ಚೆನ್ನಾಗಿ ಪಾಶ್ಚರೀಕರಿಸಲಾಗುತ್ತದೆ. ಅಂದರೆ ಅದರಲ್ಲಿರುವ ಕೊಬ್ಬಿನ ಅಂಶಗಳನ್ನು ಸಂಪೂರ್ಣ ತೆಗೆಯಲಾಗುತ್ತದೆ. ಹೀಗಾಗಿ ಆ ಹಾಲು ಬಿಳಿ ಬಣ್ಣದಾಗಿರುತ್ತದೆ. ಆರೋಗ್ಯದ ದೃಷ್ಟಿಯಲ್ಲಿ ಎರಡು ರೀತಿಯ ಹಾಲುಗಳು ಸಹ ಉತ್ತಮವೇ ಆಗಿವೆ.
ಪ್ರತಿದಿನ ಹಾಲನ್ನು ಕುಡಿಯುವುದರಿಂದ ಏನು ಪ್ರಯೋಜನ? ರೋಗ ನಿರೋಧಕ ಶಕ್ತಿ ಹೆಚ್ಚಾಗುವುದು ಹಾಲಿನಲ್ಲಿ ಪೋಷಕಾಂಶಗಳು ಅಧಿಕವಿರುವುದರಿಂದ ಇದನ್ನು ಪ್ರತಿದಿನ ಕುಡಿಯುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುವುದು.
ಹಲ್ಲು, ಮೂಳೆಯ ಆರೋಗ್ಯಕ್ಕೆ ಒಳ್ಳೆಯದು ಹಾಲಿನಲ್ಲಿ ಕ್ಯಾಲ್ಸಿಯಂ ಅಂಶ ಅಧಿಕವಿದೆ, ಆದ್ದರಿಂದ ಹಲ್ಲು ಹಾಗೂ ಮೂಳೆಯ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು.