ಉಪ್ಪಳ: ಪೈವಳಿಕೆ ಪಂಚಾಯಿತಿ ಸುರುಳಿಮೂಲೆ ನಿವಾಸಿಗಳು ಸಂಚರಿಸುತ್ತಿದ್ದ ಕಾರು, ಪುತ್ತೂರು ಮರೀಲ್ ಸನಿಹ ಕ್ಯಾಂಪ್ಕೋ ಚಾಕಲೇಟ್ ಪ್ಯಾಕ್ಟರಿ ಬಳಿ ಅಪಘಾತಕ್ಕೀಡಾಗಿದ್ದು, ಕಾರಿನಲ್ಲಿದ್ದ ಎರಡರ ಹರೆಯದ ಮಗುವಿನ ಸಹಿತ ನಾಲ್ವರು ಗಾಯಗೊಂಡಿದ್ದಾರೆ.
ಸುರುಳಿಮೂಲೆ ನಿವಾಸಿ ಕೃಷ್ಣಪ್ಪ ನಾಯ್ಕ, ಇವರ ಪತ್ನಿ ಗುಲಾಬಿ, ರೋಹಿಣಿ, ಎರಡರ ಹರೆಯದ ಮಗು ಗನ್ಯಾ ಗಾಯಗೊಂಡಿದ್ದು, ಇವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಎದುರಿನಿಂದ ಆಗಮಿಸುತ್ತಿದ್ದ ಬೈಕಿಗೆ ಹಾದಿಮಾಡಿಕೊಡುವ ಯತ್ನದಲ್ಲಿದ್ದಾಗ ರಸ್ತೆ ಅಂಚಿಗೆ ನಿಲ್ಲಿಸಿದ್ದ ಲಾರಿಗೆ ಕಾರು ಡಿಕ್ಕಿಯಾಗಿ ಅಪಘಾತ ಸಂಭವಿಸಿತ್ತು.