ಕಾಸರಗೋಡು: ಮತದಾರರು ಸಮೀಪದ ವೆಬ್‍ಸೈಟ್ ಸಂದರ್ಶಿಸಿ ನಿಮ್ಮ ಮತಗಟ್ಟೆ ವಿವರಗಳನ್ನು, ಮತದಾನ ಕೇಂದ್ರಗಳನ್ನು ತಿಳಿಯಲು ಚುನಾವಣಾ ಆಯೋಗ ಅವಕಾಶ ಕಲ್ಪಿಸಿದೆ. ದೇಶದಲ್ಲಿ ಏಳು ಹಂತದ ಲೋಕಸಭೆ ಚುನಾವಣೆಯಲ್ಲಿ ಮತದಾರರಿಗಾಗಿ 10 ಲಕ್ಷಕ್ಕೂ ಹೆಚ್ಚು ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಚುನಾವಣಾ ಆಯೋಗವು https://electoralsearch.eci.
ಮೂರು ವಿಧಾನಗಳ ಮೂಲಕ ಮತಗಟ್ಟೆಯನ್ನು ಪತ್ತೆಮಾಡಿದ ಬಳಿಕ, ಫಲಿತಾಂಶವನ್ನು ಪಡೆಯಲು ಪರದೆಯ ಮೇಲೆ ತೋರಿಸಿರುವ ಕ್ಯಾಪ್ಚಾ ಕೋಡ್ ಅನ್ನು ಸರಿಯಾಗಿ ನಮೂದಿಸಬೇಕು. ನೀವು ಮತಗಟ್ಟೆಯನ್ನು ಕಂಡುಕೊಂಡರೆ, ನೀವು google map ನಕ್ಷೆಗಳನ್ನು ಬಳಸಿಕೊಂಡು ಮತಗಟ್ಟೆಯ ಸ್ಥಳವನ್ನು ತಿಳಿದುಕೊಳ್ಳಬಹುದು. ಆ್ಯಂಡ್ರಾಯ್ಡ್ ಮತ್ತು ಐಒಎಸ್ ಪ್ಲಾಟ್‍ಫಾರ್ಮ್‍ಗಳಲ್ಲಿ ಲಭ್ಯವಿರುವ ಮತದಾರರ ಸಹಾಯವಾಣಿ ಅಪ್ಲಿಕೇಶನ್ ಮೂಲಕ ಮತ್ತು ಸಹಾಯವಾಣಿ ಸಂಖ್ಯೆ 1950 ಅನ್ನು ಸಂಪರ್ಕಿಸುವ ಮೂಲಕವೂ ಮತಗಟ್ಟೆಯ ಬಗ್ಗೆ ಮಾಹಿತಿಯನ್ನು ಪಡೆಯಬಹುದು.