ತಿರುವನಂತಪುರಂ: ವೆಚ್ಚ ಕಡಿತದ ಭಾಗವಾಗಿ ಹೈಯರ್ ಸೆಕೆಂಡರಿ ಹುದ್ದೆಗಳನ್ನು ಕಡಿತಗೊಳಿಸುವ ರಾಜ್ಯ ಸರ್ಕಾರದ ಕ್ರಮದಿಂದ ಶಿಕ್ಷಕರು ಮತ್ತು ರ್ಯಾಂಕ್ ಹೋಲ್ಡರ್ ಗಳು ಆತಂಕಗೊಂಡಿದ್ದಾರೆ.
ಹೈಯರ್ ಸೆಕೆಂಡರಿ ಶಾಲೆಗಳಲ್ಲೂ ಹುದ್ದೆಗಳನ್ನು ನಿರ್ಧರಿಸಿ, ಆ ಮೂಲಕ 25ಕ್ಕಿಂತ ಕಡಮೆ ವಿದ್ಯಾರ್ಥಿಗಳಿರುವ ಬ್ಯಾಚ್‍ಗಳಲ್ಲಿನ ಹುದ್ದೆಗಳನ್ನು ತೆಗೆದುಹಾಕುವ ಸರ್ಕಾರದ ಕ್ರಮಕ್ಕೆ ರ್ಯಾಂಕ್ ಪಟ್ಟಿದಾರರು ಆತಂಕ ವ್ಯಕ್ತಪಡಿಸಿದ್ದಾರೆ. ವರ್ಷಗಳಲ್ಲಿ, ಹೈಯರ್ ಸೆಕೆಂಡರಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಸದ್ಯ ಹಲವೆಡೆ ಶಿಕ್ಷಕರ ಸಂಖ್ಯೆ ಹೆಚ್ಚಿದೆ ಎಂದು ಅಂದಾಜಿಸಲಾಗಿದೆ. 25ಕ್ಕಿಂತ ಕಡಿಮೆ ಮಕ್ಕಳಿರುವ ಬ್ಯಾಚ್‍ಗಳಲ್ಲಿನ ಹುದ್ದೆಗಳನ್ನು ತೆಗೆದುಹಾಕುವುದರಿಂದ, ಪಿಎಸ್‍ಸಿ ಮೂಲಕ ನೇಮಕಾತಿ ಕಡಮೆಯಾಗುತ್ತದೆ. ಅಭ್ಯರ್ಥಿಗಳ ಭವಿಷ್ಯ ಅನಿಶ್ಚಿತವಾಗಿರಲಿದೆ.
ಹಲವರ ್ಯಾಂಕ್ ಪಟ್ಟಿಗಳ ಅವಧಿ ಮುಗಿಯುತ್ತಿದ್ದು, ಹುದ್ದೆ ನಿರ್ಣಯದ ಹೆಸರಲ್ಲಿ ನೇಮಕಾತಿ ತಡೆ ಹಿಡಿದಾಗ ಹೆಚ್ಚಿನ ಅವಕಾಶವಿಲ್ಲ ಎನ್ನುತ್ತಾರೆ ಅಭ್ಯರ್ಥಿಗಳು. 2019 ರ ನಂತರ ಪ್ರಕಟವಾದ ರ್ಯಾಂಕ್ ಪಟ್ಟಿಗಳಲ್ಲಿ, ನಾಮಮಾತ್ರ ನೇಮಕಾತಿ ಮಾಡಲಾಗಿದೆ.
ಇದೇ ವೇಳೆ ಹುದ್ದೆ ಕಡಿತದ ಕಾರಣ ಈಗಿರುವ ಶಿಕ್ಷಕರು ಹೊರಗುಳಿಯುವ ಆತಂಕ ಎದುರಾಗಿದೆ.