ಕೊಲ್ಲಂ: ಬಸ್ ನಿಲ್ದಾಣದಲ್ಲಿ ಕೈ ತೋರಿಸಿದರೂ ನಿಲ್ಲಿಸದ ಕೆಎಸ್ ಆರ್ ಟಿಸಿ ಚಾಲಕನಿಗೆ ಪ್ರಯಾಣಿಕರೊಬ್ಬರು ತಕ್ಕ ಪಾಠ ಕಲಿಸಿದ್ದಾರೆ.
ಕೊಲ್ಲಂನ ಕೊಟ್ಟಾರಕ್ಕರಾದಲ್ಲಿ ಈ ಘಟನೆ ನಡೆದಿದೆ. ನಿಲುಗಡೆ ಸ್ಥಳ ಇರುವುದು ಗೊತ್ತಿಲ್ಲ ಎಂದು ಹೇಳಿ ತಪ್ಪಿಸಿಕೊಳ್ಳಲು ಯತ್ನಿಸಿದ ಚಾಲಕನಿಗೆ ಇಂಪೋಸಿಷನ್ ಬರೆಸಿ ಪ್ರಯಾಣಿಕರೊಬ್ಬರು ತಕ್ಕ ಪಾಠ ಕಲಿಸಿದ್ದಾರೆ.
ಎಂಸಿ ರಸ್ತೆಯ ವಳಕಂ ಎಂಎಲ್ ಎ ಜಂಕ್ಷನ್ ನಲ್ಲಿ ಜನದಟ್ಟಣೆ ಇಲ್ಲದಿದ್ದರೂ ಕೊಟ್ಟಾಯಂಗೆ ತೆರಳುವ ಬಸ್ ನಿಲ್ಲಲಿಲ್ಲ. ಬಸ್ಸಿನ ಚಾಲಕ ಯಾರು ಎಂದು ತಿಳಿಯಲು ಪ್ರಯಾಣಿಕರು ಡಿಪೆÇೀಗೆ ಕರೆ ಮಾಡಿದರು. ರಾತ್ರಿ ಚಾಲಕ ದೂರುದಾರರನ್ನು ದೂರವಾಣಿಯಲ್ಲಿ ಸಂಪರ್ಕಿಸಿದರು.
ಎರ್ನಾಕುಳಂ ಜಿಲ್ಲೆಯಿಂದ ಒಂದು ವಾರದ ಹಿಂದೆ ಡಿಪೋಗೆ ಬಂದಿದ್ದು, ಎಂಎಲ್ ಎ ಜಂಕ್ಷನ್ ನಲ್ಲಿ ನಿಲುಗಡೆ ಇರುವುದು ತಿಳಿದಿರಲಿಲ್ಲ ಎಂಬುದು ಚಾಲಕರ ವಿವರಣೆ. ಎಲ್ಲಾ ಚಾಲಕರಿಗೂ ನಿಲುಗಡೆಗಳು ಗೊತ್ತಿರಬೇಕಲ್ಲವೇ, ಇಲಾಖೆಯ ತವರೂರಾದ ಮಾಜಿ ಸಚಿವರೂ ಆಗಿರುವ ಆರ್.ಬಾಲಕೃಷ್ಣ ಪಿಳ್ಳೆ ಅವರ ಹೆಸರಿನ ಬಸ್ ನಿಲ್ದಾಣ ಇದೇನಾ ಎಂಬುದು ಪ್ರಯಾಣಿಕರ ಪ್ರತಿ ಪ್ರಶ್ನೆಮಾಡಿದರು. ಘಟನೆಯನ್ನು ಮೇಲಧಿಕಾರಿಗಳ ಗಮನಕ್ಕೆ ತರುವುದಾಗಿ ಪ್ರಯಾಣಿಕರು ತಿಳಿಸಿದ್ದಾರೆ.
ನಂತರ ಚಾಲಕನು ಒಮ್ಮತಕ್ಕೆ ಬರಲು ಏನು ಮಾಡಬೇಕು ಎಂದು ಕೇಳಿದರು. . ವಳಕಂ ಎಂಎಲ್ ಎ ಜಂಕ್ಷನ್‍ನಲ್ಲಿ ಸೂಪರ್ ಫಾಸ್ಟ್‍ಗೆ ನಿಲುಗಡೆ ಇದೆ ಎಂದು 50 ಬಾರಿ ಬರೆದು ವಾಟ್ಸಾಪ್‍ನಲ್ಲಿ ಹಾಕುವಂತೆ ದೂರುದಾರ ಪ್ರಯಾಣಿಕ ಈ ವೇಳೆ ತಿಳಿಸಿದರು. ಈ ಇಂಪೋಸಿಷನ್ ನನ್ನು ತಪ್ಪೆಸಗಿದ ಚಾಲಕ ಶೀಘ್ರ ವಾಟ್ಸ್ ಆಫ್ ಗೆ ಕಳಿಸಿ ಮೇಲಧಿಕಾರಿಗಳ ಛೀಮಾರಿಯಿಂದ ತಪ್ಪಿಸಿಕೊಂಡರು. ಆದರೆ ಆ ಬಳಿಕ ಈ ವಿಷಯ ಸಾಮಾಜಿಕ ಜಾಲತಾಣದ ಮೂಲಕ ವೈರಲ್ ಆಗಿದೆ.