ಪೆರ್ಲ: ಪೆರ್ಲ ನಾಲಂದ ಕಾಲೇಜು ಎನ್ನೆಸ್ಸೆಸ್ ಘಟಕ ಸಂಖ್ಯೆ- 49 ಮತ್ತು ಭೂಮೀತ್ರಸೇನ ಕ್ಲಬ್ ಜಂಟಿ ಆಶ್ರಯದಲ್ಲಿ ಕಾಲೇಜು ಸಮೀಪದ ಹಳ್ಳ ಶುಚಿಗೊಳಿಸಲಾಯಿತು. ಹಳ್ಳದಲ್ಲಿ ತುಂಬಿಕೊಂಡಿದ್ದ ಕೆಸರು ಮಣ್ಣು ಇತರ ತ್ಯಾಜ್ಯಗಳನ್ನು ತೆರವುಗೊಳಿಸಲಾಯಿತು. ವಿದ್ಯಾರ್ಥಿ ಕ್ಷೇಮಾಧಿಕಾರಿ ಕೇಶವ ಶರ್ಮಾ, ಗ್ರಾಮ ವಿಕಾಸ ಯೋಜನೆ ಸಂಯೋಜಕ ಶ್ರೀನಿಧಿ ಕೆ., ಎನ್ನೆಸ್ಸೆಸ್ ಯೋಜನಾಧಿಕಾರಿ ಕಾವ್ಯ ಚಂದ್ರನ್, ಭೂಮಿತ್ರಸೇನೆ ಸಂಯೋಜಕ ಮನೋಜ್ ಕುಮಾರ್ ಪಿ.ನೇತೃತ್ವ ವಹಿಸಿದ್ದರು. ಶಿಕ್ಷಕರು ಸಹಕರಿಸಿದರು.