ಕಾಸರಗೋಡು: ವಾಣಿಜ್ಯ ಶ್ರಮಿಕ ಸಂಘ(ಬಿಎಂಎಸ್)ಕಾಸರಗೋಡು ಜಿಲ್ಲಾ ಸಮ್ಮೇಳನ ಕಾಸರಗೋಡು ಬ್ಯಾಂಕ್ ರಸ್ತೆಯಲ್ಲಿರುವ ರೋಟರಿ ಭವನದಲ್ಲಿ ಜರುಗಿತು. ವಾಣಿಜ್ಯ ಮಜ್ಡೂರ್ ಫೆಡರೇಷನ್ ರಾಜ್ಯ ಉಪಾಧ್ಯಕ್ಷ ವೇಣುಗೋಪಾಲ್ ಕಣ್ಣೂರು ಸಮಾರಂಭ ಉದ್ಘಾಟಿಸಿದರು. ಸಮಿತಿ ಅಧ್ಯಕ್ಷ ನಿಶಾಂತ್ ನೀರ್ಚಾಲ್ಅದ್ಯಕ್ಷತೆ ವಹಿಸಿದ್ದರು.
ಬಿಎಂಎಸ್ ಜಿಲ್ಲಾ ಕಾರ್ಯದರ್ಶಿ ಕೆ.ವಿ. ಬಾಬು ಸಮಾರೋಪ ಭಾಷಣ ಮಾಡಿದರು. 2023.2024ನೇ ಸಾಲಿನ ವರದಿಯನ್ನು ಕಾರ್ಯದರ್ಶಿ ದಿನೇಶ್ ಬಂಬ್ರಾಣ, ಕೋಶಾಧಿಕಾರಿ ಸಚಿನ್ ಜೆ.ಪಿ ನಗರ ಲೆಕ್ಕಪತ್ರ ಮಂಡಿಸಿದರು. ಸಮ್ಮೇಳನದಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಉಪೇಂದ್ರನ್ ಕೋಟೆಕಣಿ. ಉಪಾಧ್ಯಕ್ಷರುಗಳಾಗಿ ಮಮತ ನೀರ್ಚಾಲ್, ಕೃಷ್ಣ ನಾಯ್ಕ್ ಬಾಯಾರ್, ಗೀತಾ ಬದಿಯಡ್ಕ, ಹೇಮಾ ಯೂನಿವರ್ಸಿಟಿ, ಮಲ್ಲಿಕಾ ವಿದ್ಯಾನ, ಕಾರ್ಯದರ್ಶಿ ಯಾಗಿ ಅನಿಲ್ ಬಿ ನಾಯರ್, ಜೊತೆ ಕಾರ್ಯದರ್ಶಿಗಳಾಗಿ ಹಿತೇಶ್ ಕೆ. ವಿ. ಆರ್, ರವಿ ತಟ್ಟೆಮೇಲ್, ಎಂ.ಪಿ ಬಾಲಕೃಷ್ಣನ್. ಶೀಬ ಮಾವುಂಗಾಲ್, ಕೋಶಾಧಿಕಾರಿಯಾಗಿ ನಿಶಾಂತ್ ನಿರ್ಚಾಲ್ ಹಾಗೂ 12ಮಂದಿಯನ್ನು ಸಮಿತಿ ಸದಸ್ಯರನ್ನಾಗಿ ನೇಮಿಸಲಾಯಿತು. ದಿನೇಶ್ ಬಂಬ್ರಾಣ ಸ್ವಾಗತಿಸಿದರು. ಅನಿಲ್ ಬಿ ನಾಯರ್ ವಂದಿಸಿದರು.