ಕಾಸರಗೋಡು: ಕಾಸರಗೋಡು ಲೋಕಸಭಾ ಕ್ಷೇತ್ರದ ಎನ್‍ಡಿಎ ಅಭ್ಯರ್ಥಿ ಎಂ.ಎಲ್.ಅಶ್ವಿನಿ ಅವರಿಗೆ ಚುನಾವಣೆಯಲ್ಲಿ ಕಟ್ಟಬೇಕಾದ ಹಣದ ಒಂದು ಭಾಗವನ್ನು ಬಿ.ಡಿ.ಜೆ.ಎಸ್. ಕಾರ್ಯಕರ್ತರು ಸಂಗ್ರಹಿಸಿದ್ದಾರೆ. ಬಿ.ಡಿ.ಜೆ.ಎಸ್. ರಾಜ್ಯ ಕಾರ್ಯದರ್ಶಿ ಮನೀಶ್ ಮತ್ತು ಬಿಜೆಪಿ ರಾಜ್ಯ ಕಾರ್ಯದರ್ಶಿ ಕೆ.ರಂಜಿತ್, ಕಾಸರಗೋಡು ಲೋಕಸಭಾ ಕ್ಷೇತ್ರದ ಎನ್‍ಡಿಎ ಅಧ್ಯಕ್ಷರು ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ರವೀಶ ತಂತ್ರಿ ಕುಂಟಾರು, ಎನ್‍ಡಿಎ ಸಂಚಾಲಕ ಹಾಗೂ ಬಿಡಿಜೆಎಸ್ ಜಿಲ್ಲಾಧ್ಯಕ್ಷ ಗಣೇಶ್ ಪಾರಕಟ್ಟ ಅವರು ಬಿಡಿಜೆಎಸ್ ಮಹಿಳಾ ಕಾರ್ಯಕರ್ತರ ಸಮ್ಮುಖದಲ್ಲಿ ಮೊತ್ತವನ್ನು ಹಸ್ತಾಂತರಿಸಿದರು. ಬಿಡಿಜೆಎಸ್ ಸಂಸದೀಯ ಕ್ಷೇತ್ರದ ಸಮಾವೇಶದಲ್ಲಿ ಪಾಲ್ಗೊಂಡ ಬಳಿಕ ಎನ್.ಡಿ.ಎ. ಅಭ್ಯರ್ಥಿ ಎಂ.ಎಲ್.ಅಶ್ವಿನಿ ಮಂಜೇಶ್ವರ ಕ್ಷೇತ್ರದ ಮೀಂಜ ಪಂಚಾಯತ್‍ನ ವಿವಿಧೆಡೆ ಪ್ರಚಾರ ನಡೆಸಿದರು.