ಕಾಸರಗೋಡು: ನಗರಸಭಾ ಅಣಂಗೂರು ವಾರ್ಡಿನ ಪಚ್ಚಕ್ಕಾಡಿನಲ್ಲಿ ನಗರಸಭಾ ಅಧೀನದಲ್ಲಿರುವ ಸಾಂಸ್ಕøತಿಕ ನಿಲಯಕ್ಕೆ ಪ್ರತಿ ವರ್ಷ ಮೊತ್ತ ಮೀಸಲಿರಿಸುವುದನ್ನು ಪ್ರತಿಭಟಿಸಿ ಸ್ವತ: ಆಡಳಿತ ಪಕ್ಷದ ಸದಸ್ಯರು ಪ್ರತಿಭಟನೆಗೆ ಮುಂದಾದಾಗ ಬುಧವಾರ ನಡೆದ ಕಾಸರಗೋಡು ನಗರಸಭಾ ಕೌನ್ಸಿಲ್ ಸಭೆ ದಾಂಧಲೆಯೊಂದಿಗೆ ಪರ್ಯವಸಾನಗೊಳ್ಳುವಂತಾಯಿತು.
ಸಾಂಸ್ಕøತಿಕ ಕೇಂದ್ರದಲ್ಲಿ ಈ ಹಿಂದೆ ಆರೋಗ್ಯ ಕೇಂದ್ರ ಸ್ಥಾಪಿಸಲು ನಗರಸಭೆಯಲ್ಲಿ ತೀರ್ಮಾನ ಕೈಗೊಂಡಾಗ ಆಡಳಿತ ಪಕ್ಷದ ಕೆಲವು ಸದಸ್ಯರು ಇದನ್ನು ವಿರೋಧಿಸಿದ್ದರು. ಆದರೆ ಈ ಸಾಂಸ್ಕøತಿಕ ಕೇಂದ್ರಕ್ಕೆ ಮತ್ತೆ ಮೊತ್ತ ಮಂಜೂರುಗೊಳಿಸಿರುವುದು ಸದಸ್ಯರನ್ನು ಕೆರಳಿತ್ತು. ವಾಚನಾಲಯ ಸ್ಥಾಪನೆಗಾಗಿ ಹಣ ಮೀಸಲಿರಿಸಿರುವುದಾಗಿ ಅಧ್ಯಕ್ಷರು ತಿಳಿಸಿದಾಗ ಆಡಳಿತ ಪಕ್ಷದ ನಾಲ್ಕು ಮಂದಿ ಸದಸ್ಯರು ಇದನ್ನು ವಿರೋಧಿಸಿದ್ದರು. ಈ ವಿಷಯವನ್ನು ಮತಕ್ಕೆ ಹಾಕುವಂತೆಯೂ ಆಡಳಿತ ಪಕ್ಷದ ಒಂದು ವಿಭಾಗ ಆಗ್ರಹಿಸಿದ್ದು, ಇದಕ್ಕೆ ಬೆಂಬಲ ಸೂಚಿಸಿ ಬಿಜೆಪಿ ಸದಸ್ಯರೂ ರಂಗಕ್ಕಿಳಿದಿದ್ದರು. ಅಧ್ಯಕ್ಷರ ಪೀಠಕ್ಕೆ ಪ್ರತಿಪಕ್ಷ ಮುಖಂಡ ಪಿ. ರಮೇಶ್ ನೇತೃತ್ವದ ಸದಸ್ಯರು ಧಾವಿಸಿ ತೀರ್ಮಾನವನ್ನು ಮತಕ್ಕೆ ಹಾಕುವಂತೆ ಒತ್ತಾಯಿಸಿದರು. ಆಡಳಿತ ಮಂಡಳಿ ಇದಕ್ಕೆ ತಯಾರಾಗದಿದ್ದಾಗ ವಾಗ್ವಾದ, ತಳ್ಳಾಟಕ್ಕೆ ನಗರಸಭಾ ಕೌನ್ಸಿಲ್ ಸಭೆ ಕಾರಣವಾಯಿತು. ಈ ಸಂದರ್ಭ ಅಧ್ಯಕ್ಷ ಅಬ್ಬಾಸ್ ಬೀಗಂ ಸಭೆಯನ್ನು ಅಂತ್ಯಗೊಳಿಸದೆ ಹೊರಕ್ಕೆ ನಡೆದಿದ್ದು, ಕೆಲವು ಕೌನ್ಸಿಲರ್‍ಗಳು ಇವರನ್ನು ಹಿಂಬಾಲಿಸಿದರು. ಅಜೆಂಡಾ ಪೂರ್ತಿ ಅಮಗೀಕರಿಸಿದ ನಂತರವೇ ಸಭೆಯಿಂದ ಹೊರಬರಲಾಗಿದೆ ಎಂದು ಅಧ್ಯಕ್ಷ ಅಬ್ಬಾಸ್ ಬೀಗಂ ಸಮಜಾಯಿಷಿ ನೀಡಿದ್ದಾರೆ.