HEALTH TIPS

ಕೊಂಡೆವೂರಿನಲ್ಲಿ ಲೋಕಕ್ಷೇಮಕ್ಕಾಗಿ ನವಗ್ರಹ ಯಾಗ ಮತ್ತು ಪ್ರತಿಷ್ಠೆ ಸಂಪನ್ನ

                  ಉಪ್ಪಳ: ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮ ಮಠದಲ್ಲಿ ನಿನ್ನೆ (ಭಾನುವಾರ) ಲೋಕಕ್ಷೇಮಕ್ಕಾಗಿ ಅತ್ಯಪೂರ್ವ ‘ನವಗ್ರಹ ಪ್ರತಿಷ್ಠೆ’ ಹಾಗೂ ‘ಅಷ್ಟೋತ್ತರ ಸಹಸ್ರ ನವಗ್ರಹ ಯಾಗ’ಗಳು ಸಹಸ್ರಾರು ಭಕ್ತಾದಿಗಳ ಪಾಲ್ಗೊಳ್ಳುವಿಕೆಯಿಂದ ವಿಜೃಂಭಣೆಯಿಂದ ನಡೆಯಿತು.

                ಉಡುಪಿಯ ಅದಮಾರು ಮಠದ ಪೂಜ್ಯ ಶ್ರೀ ಈಶ ಪ್ರಿಯ ತೀರ್ಥ ಶ್ರೀಪಾದಂಗಳವರು ತಮ್ಮ ಆಶೀರ್ವಚನ ನೀಡಿ “ಯಾಗದ ಮೂಲಕ ರಾಷ್ಟ್ರಕ್ಕೆ ಸಂಪತ್ತು ತನ್ಮೂಲಕ ಸದ್ಭಾವನೆ ದೊರೆಯುತ್ತದೆ, ನಾವೆಲ್ಲರೂ ದೇಶದ ಏಳಿಗೆಯನ್ನು ಕೊಂಡೆವೂರು ಶ್ರೀಗಳಂತಹ ಯತಿಶ್ರೇಷ್ಠರ ಮಾರ್ಗದರ್ಶನದಲ್ಲಿ ಬಯಸೋಣ” ಎಂದು ಕರೆ ನೀಡಿದರು. 


                 ಇದೇ ಸಂದರ್ಭದಲ್ಲಿ ಕಟೀಲು ಶ್ರೀ ಕ್ಷೇತ್ರದ ಅನುವಂಶಿಕ ಪ್ರಧಾನ ಆಚಾರ್ಯತ್ರಯರಲ್ಲಿ ಒಬ್ಬರಾದ ಬ್ರಹ್ಮಶ್ರೀ ಅನಂತಪದ್ಮನಾಭ ಆಸ್ರಣ್ಣರು “ಯಜ್ಞ ಕಾಮಧೇನು ಇದರಿಂದಾಗಿ ವಾತಾವರಣದ ಓಝೋನ್ ಪದರ ಗಟ್ಟಿಯಾಗುತ್ತದೆ, ನಾವು ಅಲಭ್ಯ ಲಾಭವನ್ನು ಪಡೆಯುತ್ತೇವೆ, ಇನ್ನೊಬ್ಬರ ಏಳಿಗೆಯನ್ನೇ ಬಯಸುವ  ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರು ಈ ಎಲ್ಲಾ ಚಟುವಟಿಕೆಗಳಿಗೆ ಕಾರಣಕರ್ತೃರಾಗಿದ್ದಾರೆ ಎಂದು ಹೇಳಿ  ನಮಗೆಲ್ಲರಿಗೂ ಕೂಡ ನವಗ್ರಹರ ಆರಾಧನೆಯ ಮೂಲಕವಾಗಿ ಸನ್ಮಂಗಳವಾಗಲಿ” ಎಂದರು.

                ಎಡನೀರು ಮಠದ ಪರಮ ಪೂಜ್ಯ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು, ಶ್ರೀ ಕ್ಷೇತ್ರ ಕರಿಂಜೆಯ ಪೂಜ್ಯ ಶ್ರೀ ಮುಕ್ತಾನಂದ ಸ್ವಾಮೀಜಿ ಮತ್ತು ಕೊಂಡೆವೂರು ಮಠದ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರು ದಿವ್ಯ ಸಾನ್ನಿಧ್ಯ ವಹಿಸಿದ್ದರು.

                 ಈ ಸಂದರ್ಭದಲ್ಲಿ  ರಾಜ್ಯಸಭಾ ಸದಸ್ಯ, ಯಾಗ ಸಮಿತಿ ಅಧ್ಯಕ್ಷ ಕೆ. ನಾರಾಯಣ, ಗೌರವಾಧ್ಯಕ್ಷ ಸದಾಶಿವ ಶೆಟ್ಟಿ ಕುಳೂರು ಕನ್ಯಾನ, ಉದ್ಯಮಿ ರಮೇಶ್ ರಾಜು, ಮಾಜಿ ರಾಜ್ಯಸಭಾ ಸದಸ್ಯ ಡಾ. ಕೆ. ಸಿ. ರಾಮಮೂರ್ತಿ, ಕೆ.ಕೆ. ಶೆಟ್ಟಿ, ವಿಶ್ವನಾಥ್ ವೆಂಗರೆ, ಡಾ. ಮೋಹನ್‍ದಾಸ್ ಬೆಂಗಳೂರು, ಎಮ್ ಪಿ ಉಮಾಶಂಕರ್ ಬೆಂಗಳೂರು, ಎ.ಜೆ ಶೇಖರ್ ತೊಕ್ಕೊಟ್ಟು, ಪ್ರದೀಪ್ ಕುಮಾರ್ ಕಲ್ಕೂರ ಮೊದಲಾದವರು ಗೌರವ ಉಪಸ್ಥಿತರಿದ್ದರು.




               ಯಾಗ ಸಮಿತಿಯ ಪ್ರಧಾನ ಕಾರ್ಯದರ್ಶಿ ನ್ಯಾಯವಾದಿ ಗಂಗಾಧರ ಕೊಂಡೆವೂರು ಮತ್ತು ಸಾಂಸ್ಕøತಿಕ ಕಾರ್ಯಕ್ರಮದ ಪ್ರಮುಖ ದಿನಕರ್ ಹೊಸಂಗಡಿ ಕಾರ್ಯಕ್ರಮವನ್ನು ನಿರೂಪಿಸಿದರು.

             ಅಪರಾಹ್ಣ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿದ್ಯಾರ್ಥಿಗಳಿಂದ ‘ಆಳ್ವಾಸ್ ಸಾಂಸ್ಕøತಿಕ ವೈಭವ’ ಎಂಬ ವಿಶಿಷ್ಟ ಕಾರ್ಯಕ್ರಮ ನಡೆಯಿತು.

              ಸೂರ್ಯಾಸ್ತ 6.39 ಕ್ಕೆ ಪರಮ ಪೂಜ್ಯ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರಿಂದ ಭಜನಾ ಸಪ್ತಾಹದ ದೀಪ ಪ್ರಜ್ವಲನೆ ನಂತರ ನಕ್ಷತ್ರವನದಲ್ಲಿ ದೀಪೆÇೀತ್ಸವ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಿತು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries