ಕೊಚ್ಚಿ: ಬೀದಿ ನಾಯಿಗಳಿಗಿಂತ ಮನುಷ್ಯರಿಗೆ ಆದ್ಯತೆ ನೀಡಬೇಕು ಎಂದು ಹೈಕೋರ್ಟ್ ಹೇಳಿದೆ. ಶ್ವಾನಪ್ರೇಮಿಗಳು ಹೇಳುವುದರಲ್ಲಿ ಪ್ರಾಮಾಣಿಕತೆ ಇದ್ದರೆ ಮಾಧ್ಯಮಗಳಲ್ಲಿ ಮಾತನಾಡಬಾರದು ಮತ್ತು ನಾಯಿಗಳ ರಕ್ಷಣೆಗೆ ಸ್ಥಳೀಯ ಸಂಸ್ಥೆಗಳು ಮುಂದಾಗಬೇಕು ಎಂದು ನ್ಯಾಯಾಲಯ ಹೇಳಿದೆ.
ಪ್ರಾಣಿ ಪ್ರಿಯರು ಬೀದಿ ನಾಯಿಗಳನ್ನು ಉಳಿಸಲು ಮುಂದೆ ಬಂದರೆ, ಸ್ಥಳೀಯಾಡಳಿತ ಸಂಸ್ಥೆಗಳು ಪ್ರಾಣಿಗಳ ಜನನ ನಿಯಂತ್ರಣ ನಿಯಮಗಳು ಮತ್ತು ಷರತ್ತುಗಳಿಗೆ ಅನುಗುಣವಾಗಿ ಪರವಾನಗಿ ನೀಡಬೇಕು ಎಂದು ನ್ಯಾಯಮೂರ್ತಿ ಪಿವಿ ಕುಂಞÂ್ಞ ಕೃಷ್ಣನ್ ಸಲಹೆ ನೀಡಿರುವರು. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರದೊಂದಿಗೆ ಚರ್ಚಿಸಿ ಅಗತ್ಯಬಿದ್ದರೆ ಮಾರ್ಗಸೂಚಿ ಅಥವಾ ಯೋಜನೆ ಸಿದ್ಧಪಡಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚಿಸಿದೆ.
ಬೀದಿ ನಾಯಿಗಳ ದಾಳಿಗೆ ವಿದ್ಯಾರ್ಥಿಗಳು ಒಂಟಿಯಾಗಿ ಶಾಲೆಗೆ ಹೋಗಲು ಭಯಪಡುತ್ತಿದ್ದಾರೆ. ಕೆಲವೆಡೆ ಜನರು ಉಪಾಹಾರ ಸೇವಿಸಲು ಹೊರ ಹೋಗಲು ಸಾಧ್ಯವಾಗುತ್ತಿಲ್ಲ. ಬೀದಿ ನಾಯಿಗಳ ವಿರುದ್ಧ ಕ್ರಮ ಕೈಗೊಂಡರೆ ಶ್ವಾನಪ್ರೇಮಿಗಳು ದೂರು, ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ನ್ಯಾಯಾಲಯ ಹೇಳಿದೆ. ಕಣ್ಣೂರಿನ ಮನೆ ಆವರಣದಲ್ಲಿ ಬೀದಿನಾಯಿಗಳನ್ನು ಸಾಕುತ್ತಿರುವುದನ್ನು ಪ್ರಶ್ನಿಸಿ ಕಣ್ಣೂರು ಮುಜತ್ತಡಂ ವಾರ್ಡ್‍ನ ಟಿ.ಎಂ.ಇರ್ಷಾದ್ ಮತ್ತು ಮುಹಮ್ಮದ್ ಇಮ್ತಿಯಾಝ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ನಡೆಸಿತು.
ಅನಾರೋಗ್ಯ ಅಥವಾ ಗಾಯಗೊಂಡ ಬೀದಿ ನಾಯಿಗಳನ್ನು ನೋಡಿಕೊಳ್ಳುವ ರಾಜೀವ್ ಕೃಷ್ಣನ್ ಅವರು ತಮ್ಮ ಮನೆಯಲ್ಲಿ ಅನೈರ್ಮಲ್ಯದ ವಾತಾವರಣದಲ್ಲಿ ಸಾಕುತ್ತಾರೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿತ್ತು. ಆದರೆ ರಾಜೀವ್ ಕೃಷ್ಣನ್ ಅವರು ಪ್ರಾಣಿ ಪ್ರಿಯರಾಗಿದ್ದು, ನೆರೆಹೊರೆಯವರಿಗೆ ತೊಂದರೆಯಾಗದಂತೆ ಮತ್ತು ಮಾಲಿನ್ಯವಿಲ್ಲದೆ ನಾಯಿಗಳನ್ನು ರಕ್ಷಿಸುತ್ತಾರೆ ಎಂದು ಮಾಹಿತಿ ನೀಡಿದರು.
ರಾಜೀವ್ ಕೃಷ್ಣನ್ ಅವರು ಒಂದು ತಿಂಗಳೊಳಗೆ ಪರವಾನಗಿಗಾಗಿ ಅರ್ಜಿ ಸಲ್ಲಿಸಬೇಕು ಮತ್ತು ಕಟ್ಟುನಿಟ್ಟಿನ ಷರತ್ತುಗಳ ಅಡಿಯಲ್ಲಿ ಪರವಾನಗಿ ನೀಡಲು ಕಣ್ಣೂರು ಕಾಪೆರ್Çರೇಷನ್‍ಗೆ ಆದೇಶಿಸಬೇಕು ಎಂದು ನ್ಯಾಯಾಲಯ ಸೂಚಿಸಿದೆ. ಪರವಾನಗಿಗೆ ಅರ್ಜಿ ಸಲ್ಲಿಸದಿದ್ದಲ್ಲಿ ಬೀದಿ ನಾಯಿಗಳನ್ನು ಆವರಣದಿಂದ ತೆಗೆದುಹಾಕಲು ಪಾಲಿಕೆ ಕ್ರಮಕೈಗೊಳ್ಳಬೇಕು ಎಂದು ಸೂಚಿಸಲಾಗಿದೆ.