ಇಡುಕ್ಕಿ: ಸಿಪಿಎಂ ಮುಖಂಡ ಹಾಗೂ ಶಾಸಕ ಎಂ.ಎಂ.ಮಣಿ ಅವರ ಅಸಭ್ಯ ಮಾತು ಮತ್ತೆ ವಿವಾದಕ್ಕೆ ಕಾರಣವಾಗಿದೆ. ಇಡುಕ್ಕಿಯ ತೂಕ್ಕುಪಾಲದಲ್ಲಿ ನಿನ್ನೆ ನಡೆದ ಪಕ್ಷದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ವೇಳೆ ಮಣಿ ಅಸಭ್ಯವಾಗಿ ಮಾತನಾಡಿರುವರು.
ಇಡುಕ್ಕಿಯ ಯುಡಿಎಫ್ ನಾಯಕರನ್ನು ವೇಶ್ಯೆಯರು ಮತ್ತು ನಪುಂಸಕರು ಎಂದು ಮಣಿ ಬಣ್ಣಿಸಿ ವಿವಾದಕ್ಕೆ ನಾಂದಿಹಾಡಿದರು.
‘‘ಒಬ್ಬ ವ್ಯಕ್ತಿಯ ಪೌಡರ್ ಹಾಕಿದ ಪೋಟೋ ಇದೆ. ಈ ಕೇರಳಕ್ಕಾಗಿ ಧ್ವನಿ ಎತ್ತಿದ್ದೀರಾ? ನೀವು ದೇಶಕ್ಕಾಗಿ ಉಪದೇಶ ಮಾಡಿದ್ದೀರಾ? ಸುಮ್ಮನೆ ಪೌಡರ್ ಹಾಕಿಕೊಂಡು ಬ್ಯೂಟಿ ಪಾರ್ಲರ್ ಗೆ ನುಗ್ಗಿ ಪೋಟೋ ತೆಗೆಸಿಕೊಂಡಿದ್ದಾರೆ. ನಪುಂಸಕ ಬಾಹುಬಲಿ ಕೈಕೊಟ್ಟರೆ ಮತ ಹಾಕಿದವರೆಲ್ಲ ಸಂಕಷ್ಟ ಅನುಭವಿಸುತ್ತಾರೆ. ..’’ ಎಂಬುದು ಮಣಿ ಅವರ ಟೀಕೆಯಾಗಿತ್ತು. ಅಲ್ಲದೆ, ಇಡುಕ್ಕಿಯ ಮತ್ತೊಬ್ಬ ಯುಡಿಎಫ್ ನಾಯಕನನ್ನು ಮಹಿಳಾವಾದಿ ಎಂದು ಕರೆಯುವ ಮೂಲಕ ಎಂಎಂ ಮಣಿ ಭಾಷಣ ಕೊನೆಗೊಳಿಸಿದರು.
ಎಂ.ಎಂ.ಮಣಿ ಅವರ ನಿಂದನೆಯ ಮಾತುಗಳು ಹೊಸದಲ್ಲವಾದರೂ ಸಿಪಿಎಂ ನಾಯಕತ್ವ ಈ ವಿಷಯದಲ್ಲಿ ಅನುಸರಿಸಿದ ಮೃದು ಧೋರಣೆ ಮತ್ತು ಮೌನ ದೊಡ್ಡ ಟೀಕೆಗೆ ನಾಂದಿ ಹಾಡಿದೆ. ಎಂ.ಎಂ.ಮಣಿ ಅವರ ಅಶ್ಲೀಲ ಮಾತುಗಳನ್ನು ಕಂಡಿಲ್ಲ ಎಂಬಂತೆ ‘ಪೆÇಲಿಟಿಕಲ್ ಕರೆಕ್ಟ್ ನೆಸ್’ ಎಂದು ಬೋಧಿಸುವ ಎಡಪಂಥೀಯರು ಹಾಗೂ ಸಾಂಸ್ಕøತಿಕ ಕಾರ್ಯಕರ್ತರ ಟ್ರೆಂಡ್ ಸಾಮಾಜಿಕ ಜಾಲತಾಣಗಳಲ್ಲಿ ಮತ್ತೆ ಪ್ರಶ್ನೆಯಾಗುತ್ತಿದೆ. ಸಿಪಿಎಂ ಮಣಿಯವರ ತಪ್ಪು ಹೇಳಿಕೆಗಳನ್ನು ಸ್ಥಳೀಯ ಭಾಷೆ ಮತ್ತು ಇಡುಕ್ಕಿಯ ವ್ಯಕ್ತಿಯ ಮುಖವಾಣಿ ಎಂದು ಲೇಬಲ್ ಮಾಡುವ ಮೂಲಕ ಸಮರ್ಥಿಸಿಕೊಂಡಿದೆ.