ಕೊಚ್ಚಿ: ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪುತ್ರಿ ವೀಣಾ ವಿಜಯನ್‍ಗೆ ಸಂಬಂಧಿಸಿದ ಮಾಸಿಕ ಲಂಚ ಸ್ವೀಕಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಮೊದಲು ಸಿಎಂಆರ್‍ಎಲ್‍ಗೆ ನೋಟಿಸ್ ಜಾರಿ ಮಾಡಲಿದೆ.
ಎಕ್ಸಾಲಾಜಿಕ್‍ಗೆ ಸಿಎಂಆರ್‍ಎಲ್ ಪಾವತಿಸಿದ ಪುರಾವೆಗಳನ್ನು ಸಂಗ್ರಹಿಸುವುದು ತನಿಖೆಯ ಮೊದಲ ಹಂತವಾಗಿದೆ. ಇದಕ್ಕಾಗಿ ಸಿಎಂಆರ್ ಎಲ್ ಅಧಿಕಾರಿಗಳನ್ನು ಕರೆಸಿ ತಕ್ಷಣ ನೋಟಿಸ್ ನೀಡಿ ವಿಚಾರಣೆ ನಡೆಸಲಾಗುವುದು. ಖಾತೆ ದಾಖಲೆಗಳನ್ನೂ ಪರಿಶೀಲಿಸಲಾಗುವುದು. ಆ ಬಳಿಕ ವೀಣಾ ವಿಜಯನ್ ಅವರಿಗೆ ನೋಟಿಸ್ ನೀಡಲಾಗುವುದು.
ಸಿಎಂಆರ್‍ಎಲ್ ಕಂಪನಿಯಲ್ಲಿ ಷೇರು ಮತ್ತು ಡೈರೆಕ್ಟರ್‍ಶಿಪ್ ಹೊಂದಿರುವ ಕೇರಳ ಇಂಡಸ್ಟ್ರಿಯಲ್ ಡೆವಲಪ್‍ಮೆಂಟ್ ಕಾಪೆರ್Çರೇಷನ್ (ಕೆ.ಎಸ್.ಐ.ಡಿ.ಸಿ) ಗೂ ಇಡಿ ನೋಟಿಸ್ ನೀಡಲಿದೆ. ಸಾಫ್ಟ್‍ವೇರ್ ಸೇವೆಗಳ ಹೆಸರಿನಲ್ಲಿ ಎಕ್ಸಾಲಾಜಿಕ್ ಸೊಲ್ಯೂಷನ್ಸ್‍ಗೆ ಸಿಎಂಆರ್‍ಎಲ್ ಮಾಸಿಕ 1.72 ಕೋಟಿ ಪಾವತಿಸಿದೆ ಎಂದು ಆದಾಯ ತೆರಿಗೆ ಇಲಾಖೆ ಪತ್ತೆ ಹಚ್ಚಿದ ಮೇಲೆ ಇಡಿ ಪ್ರಕರಣವನ್ನು ಕೈಗೆತ್ತಿಕೊಂಡು ಮುಂದುವರಿದಿದೆ. 2019 ರಲ್ಲಿ, ಆದಾಯ ತೆರಿಗೆ ಇಲಾಖೆಯು ಸಿಎಂಆರ್‍ಎಲ್ ಕಂಪನಿ ಮತ್ತು ಅದರ ಎಂಡಿ ಮತ್ತು ಅಧಿಕಾರಿಗಳ ಮನೆಗಳ ತಪಾಸಣೆಯ ನಂತರ ದೆಹಲಿಯ ಆದಾಯ ತೆರಿಗೆ ಇಲಾಖೆಯ ಮಧ್ಯಂತರ ಇತ್ಯರ್ಥ ಮಂಡಳಿಗೆ ವರದಿಯನ್ನು ಸಲ್ಲಿಸಿತು.
2016 ರಲ್ಲಿ ವೀಣಾ ವಿಜಯನ್ ಮತ್ತು ಸಿಎಂಆರ್‍ಎಲ್ ಕಂಪನಿಯು ಮಾರ್ಕೆಟಿಂಗ್ ಕನ್ಸಲ್ಟೆನ್ಸಿ ಸೇವೆಗಳಿಗಾಗಿ ಮೊದಲು ಒಪ್ಪಂದಕ್ಕೆ ಸಹಿ ಹಾಕಿತು. ತಿಂಗಳಿಗೆ ಐದು ಲಕ್ಷ ಸಂಬಳ ಬರುತ್ತಿತ್ತು. ಸಾಫ್ಟ್‍ವೇರ್ ಸೇವೆಗಳಿಗಾಗಿ 2017 ರಲ್ಲಿ ಮತ್ತೊಂದು ಒಪ್ಪಂದವನ್ನು ಮಾಡಿಕೊಳ್ಳಲಾಯಿತು. ತಿಂಗಳಿಗೆ ಮೂರು ಲಕ್ಷ ಸಂಬಳ. ಆದಾಯ ತೆರಿಗೆ ಇಲಾಖೆಯ ತನಿಖೆಯ ವೇಳೆ, ಸಿಎಂಆರ್‍ಎಲ್ ಅಧಿಕಾರಿಗಳು ಎಕ್ಸಾಲಾಜಿಕ್ ಅಥವಾ ವೀಣಾದಿಂದ ಯಾವುದೇ ಸೇವೆಯನ್ನು ಪಡೆದಿಲ್ಲ ಎಂದು ಹೇಳಿಕೆ ನೀಡಿದ್ದರು. ಇದರ ಆಧಾರದ ಮೇಲೆ, ತನಿಖೆಯ ಭಾಗವಾಗಿ ಇಡಿ ಮೊದಲು ಸಿಎಂಆರ್‍ಎಲ್‍ಗೆ ನೋಟಿಸ್ ಜಾರಿ ಮಾಡಿದೆ. ಗಂಭೀರ ವಂಚನೆ ತನಿಖಾ ಕಛೇರಿ (ಎಸ್.ಎಫ್.ಐ.ಒ) ಸಿಎಂಆರ್‍ಎಲ್ ನಿಂದ ಎಕ್ಸಲಾಜಿಕ್ ಗೆ ಅಕ್ರಮ ಪಾವತಿಯ ಕುರಿತು ತನಿಖೆ ನಡೆಸುತ್ತಿದೆ. ಈ ಹಿಂದೆ ವೀಣಾ ಮಾಸಿಕ ಲಂಚ ಖರೀದಿಸಿರುವ ಆರೋಪಕ್ಕೆ ಸಂಬಂಧಿಸಿದಂತೆ ಎಸ್‍ಎಫ್‍ಐಒ ನೇರವಾಗಿ ಸಿಎಂಆರ್‍ಎಲ್ ಮತ್ತು ಕೆಎಸ್ ಐಡಿಸಿ ವಿರುದ್ಧ ತನಿಖೆ ನಡೆಸಿತ್ತು.