HEALTH TIPS

ವೀಣಾವಾದಿನಿ ಶಿವರಾತ್ರಿ ಸಂಭ್ರಮ

             ಬದಿಯಡ್ಕ: 'ಶಿವರಾತ್ರಿಯು ಉಪವಾಸ ಹಾಗೂ ಜಾಗರಣೆಯಿಂದ ಮಹತ್ವ ಪಡೆದಿದೆ. ನಿರಂತರ ಶಿವ ಸ್ಮರಣೆಯು ಪುಣ್ಯಪ್ರದ.  ಶಿವರಾತ್ರಿಯ ವಿಶೇಷ ಆಚರಣೆಯಾದ ಜಾಗರಣೆಯನ್ನು ಸಂಗೀತದ ಮೂಲಕ ಆಚರಿಸಲು ವೀಣಾವಾದಿನಿ ಸಂಗೀತ ಸಂಸ್ಥೆಯು ಅವಕಾಶ ನೀಡಿ ಗಮನ ಸೆಳೆದಿದೆ. ಇದರಿಂದ ಆಚರಣೆಯು ಇನ್ನಷ್ಟು ಅರ್ಥಪೂರ್ಣವಾಗುತ್ತದೆ  ಎಂದು ಶಿಕ್ಷಕ ಶಿವಪ್ಪ ಟಿ ಹೇಳಿದರು.

            ಅವರು ಶುಕ್ರವಾರ ಪುಳಿತ್ತಡಿಯ ನಾರಾಯಣೀಯಂ ಸಂಗೀತ ಶಾಲೆಯಲ್ಲಿ ವೀಣಾವಾದಿನಿ ಸಂಗೀತ ವಿದ್ಯಾಪೀಠದ ಆಶ್ರಯದಲ್ಲಿ ನಡೆದ 'ಅಖಂಡ ಶಿವ ಸಂಗೀತ ಸ್ಮರಣಂ' ಕಾರ್ಯಕ್ರಮದಲ್ಲಿ ಮಾತನಾಡಿದರು. 


           ಸಭೆಯ ಅಧ್ಯಕ್ಷತೆಯನ್ನು ಬ್ರಹ್ಮಶ್ರಿ ಮಲ್ಲಿಯೂರು ದಿವಾಕರನ್ ನಂಬೂದಿರಿ ವಹಿಸಿದ್ದರು. ಸಭೆಯಲ್ಲಿ ಎಚ್ ಎಸ್ ಭಟ್ ಕಾಂಞಂಗಾಡ್, ಪಡುಮಲೆ ಶ್ರೀನಿವಾಸ ಭಟ್, ಪಡುಮಲೆ ಮನೋಹರ ಪ್ರಸಾದ್ ಭಾಗವಹಿಸಿದ್ದರು. 


         ರಾತ್ರಿ ವಿಶೇಷ ಶಿವಪೂಜೆ ನಡೆಯಿತು. ಶನಿವಾರ ಬೆಳಗ್ಗೆ 7 ರ  ತನಕ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಟಿ ಪಿ ಶ್ರೀನಿವಾಸನ್ ಕಾಂಞಂಗಾಡು, ಸದಾಶಿವ ಆಚಾರ್ಯ ಕಾಸರಗೋಡು, ವೇಣುಗೋಪಾಲ ಶ್ಯಾನುಬೋಗ್, ಧನಶ್ರೀ ಶಬರಾಯ, ಅನ್ನಪೂರ್ಣ ಪ್ರದೀಪ್ ತಿರುವನಂತಪುರ, ಮೇಧಾ ಉಡುಪ, ಕೃಷ್ಣ ಕುಮಾರಿ, ಡಾ.ಹೇಮಶ್ರೀ, ಶ್ರೀವಾಣಿ ಕಾಕುಂಜೆ, ಅದಿತಿ ಕೊಂಕೋಡಿ,  ರಮ್ಯಾ ಮಾಧವನ್, ಅಭಿಷೇಕ್ ಕೋಳಿಕ್ಕಜೆ, ಅಶ್ವಿನಿ ಪಟ್ಟಾಜೆ, ಅನಘಾ ಪಿ ಎಸ್, ಮುರಲೀ ಮಾಧವ ಪೆರಂಜೆ, ಸಹನಾ ಕೃಷ್ಣ ಕುಮಾರ ಮೊದಲಾದವರು ಭಾಗವಹಿಸಿದ್ದರು. ಹಿಮ್ಮೇಳದಲ್ಲಿ ಪ್ರಭಾಕರ ಕುಂಜಾರು , ಚೇರ್ತಲ ಜಿ ಕೃಷ್ಣ ಕುಮಾರ್ ಮೊದಲಾದವರು ಭಾಗವಹಿಸಿದ್ದರು. ವಿದ್ವಾನ್ ಯೋಗೀಶ ಶರ್ಮ ಬಳ್ಳಪದವು ಸ್ವಾಗತಿಸಿ, ವಂದಿಸಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ವಿದ್ಯಾರ್ಥಿಗಳು, ಪೋಷಕರು ಹಾಗೂ ಸಂಗೀತಾಸಕ್ತರು ಭಾಗವಹಿಸಿದ್ದರು. ಜೊತೆಗೆ ಬಾಲಕೃಷ್ಣ ಮಂಜೇಶ್ವರ ಅವರ ಶಿಷ್ಯೆಯರಿಂದ ಭರತನಾಟ್ಯ ಪ್ರದರ್ಶನವೂ ನಡೆಯಿತು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries