ಕಾಸರಗೋಡು: ಗ್ರಾಹಕರು ಸಮಾಜದ ಅವಿಭಾಜ್ಯ ಅಂಗವಾಗಿದ್ದು, ಗ್ರಾಹಕರಿಗೆ ಅವರ ಹಕ್ಕುಗಳ ಬಗ್ಗೆ ಅರಿವು ಮೂಡಿಸುವುದು ವಿಶ್ವ ಗ್ರಾಹಕ ಹಕ್ಕುಗಳ ಪ್ರಮುಖ ಉದ್ದೇಶವಾಗಿದೆ ಎಂಬುದಾಗಿ ಶಾಸಕ ಎನ್.ಎ ನೆಲ್ಲಿಕುನ್ನು ತಿಳಿಸಿದ್ದಾರೆ.
ಅವರು ಜಿಲ್ಲಾ ಯೋಜನಾ ಸಮಿತಿ ಸಭಾಂಗಣದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಜಿಲ್ಲಾ ಸರಬರಾಜು ಕಛೇರಿ ವತಿಯಿಂದ ಆಯೋಜಿಸಿದ್ದ ವಿಶ್ವ ಗ್ರಾಹಕರ ಹಕ್ಕುಗಳ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಜನರು ಸುಳ್ಳು ಭರವಸೆಗಳಿಗೆ ಮೋಸಹೋಗುವುದನ್ನು ತಪ್ಪಿಸಲು ಗ್ರಾಹಕರಿಗಿರುವ ಹಕ್ಕುಗಳ ಬಗ್ಗೆ ಪ್ರತಿಯೊಬ್ಬ ಗ್ರಾಹಕ ಅರಿತುಕೊಳ್ಳಬೇಕಾದ ಅಗತ್ಯವಿದೆ. ನಮ್ಮ ಹಕ್ಕುಗಳ ಬಗ್ಗೆ ಪ್ರತಿಯೊಬ್ಬ ಗ್ರಾಹಕ ಜಾಗೃತನಾಗಬೇಕು ಎಂದು ತಿಳಿಸಿದರು. ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಕೆ.ಕೃಷ್ಣನ್ ಅಧ್ಯಕ್ಷತೆ ವಹಿಸಿದ್ದರು.
ವಕೀಲ ಎ.ರಾಧಾಕೃಷ್ಣನ್ ಅವರು 'ಗ್ರಾಹಕರಿಗೆ ಜವಾಬ್ದಾರಿಯುತ ಮತ್ತು ನ್ಯಾಯಯುತ ಕೃತಕ ಬುದ್ಧಿಮತ್ತೆ' ವಿಷಯದ ಕುರಿತು ತರಗತಿ ನಡೆಸಿದರು. ಜಿಲ್ಲಾ ಗ್ರಾಹಕ ವಿವಾದಪರಿಹಾರ ಆಯೋಗದ ಸದಸ್ಯೆ ಕೆ.ಜಿ.ಬೀನಾ ಉಪಸ್ಥಿತರಿದ್ದರು. ಜಿಲ್ಲಾ ಸರಬರಾಜು ಅಧಿಕಾರಿ ಎಂ.ಜುಲ್ಫಿಕರ್ ಸ್ವಾಗತಿಸಿದರು. ಹೊಸದುರ್ಗ ತಾಲೂಕು ಸರಬರಾಜು ಅಧಿಕಾರಿ ಜಿ.ಮಾಧವನ್ ವಂದಿಸಿದರು.