ನವದೆಹಲಿ: ರಷ್ಯಾ ಸೇನೆಯಲ್ಲಿ ಸಹಾಯಕ ಸಿಬ್ಬಂದಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಭಾರತೀಯರನ್ನು ಶೀಘ್ರವೇ ಬಿಡುಗಡೆ ಮಾಡುವಂತೆ ರಷ್ಯಾದ ಮೇಲೆ ತೀವ್ರ ಒತ್ತಡ ಹೇರಿರುವುದಾಗಿ ಭಾರತ ಶುಕ್ರವಾರ ತಿಳಿಸಿದೆ.
ನವದೆಹಲಿ: ರಷ್ಯಾ ಸೇನೆಯಲ್ಲಿ ಸಹಾಯಕ ಸಿಬ್ಬಂದಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಭಾರತೀಯರನ್ನು ಶೀಘ್ರವೇ ಬಿಡುಗಡೆ ಮಾಡುವಂತೆ ರಷ್ಯಾದ ಮೇಲೆ ತೀವ್ರ ಒತ್ತಡ ಹೇರಿರುವುದಾಗಿ ಭಾರತ ಶುಕ್ರವಾರ ತಿಳಿಸಿದೆ.
ಈ ಕುರಿತು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ರಷ್ಯಾ ಮಿಲಿಟರಿಯಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಭಾರತೀಯರು ಮೃತಪಟ್ಟ ಬಳಿಕ, ಈ ರೀತಿಯ ಉದ್ಯೋಗಗಳನ್ನು ಆಯ್ಕೆ ಮಾಡಿಕೊಳ್ಳದಂತೆ ಭಾರತವು ಕಳೆದ ವಾರ ತನ್ನ ಪ್ರಜೆಗಳಿಗೆ ಕರೆ ನೀಡಿತ್ತು.
ಮೃತಪಟ್ಟಿರುವ ಇಬ್ಬರು ಭಾರತೀಯರ ಪಾರ್ಥಿವ ಶರೀರವನ್ನು ಭಾರತಕ್ಕೆ ತರಲು ಪ್ರಯತ್ನಗಳು ನಡೆದಿವೆ ಎಂದು ಅವರು ಪ್ರತಿಕ್ರಿಯಿಸಿದರು.
'ಮೃತದೇಹಗಳ ಹಸ್ತಾಂತರಕ್ಕೆ ಸಂಬಂಧಿಸಿದ ಪತ್ರ ವ್ಯವಹಾರಗಳು ಮುಗಿದಿವೆ. ನಾವು ನಿಯೋಜಿಸಿರುವ ಏಜೆನ್ಸಿಗೆ ಮೃತದೇಹಗಳು ಹಸ್ತಾಂತರವಾಗಿದ್ದು, ನಾವು ರಷ್ಯಾದ ಅಧಿಕಾರಿಗಳು ಮತ್ತು ಮೃತರ ಕುಟುಂಬದವರ ಜತೆ ಸಂಪರ್ಕದಲ್ಲಿದ್ದೇವೆ. ಶೀಘ್ರದಲ್ಲಿಯೇ ಪಾರ್ಥಿವ ಶರೀರಗಳು ಭಾರತಕ್ಕೆ ಬರುವ ವಿಶ್ವಾಸವಿದೆ' ಎಂದು ಜೈಸ್ವಾಲ್ ವಿವರಿಸಿದರು.