ಕಾಸರಗೋಡು: ಲೋಕಸಭಾ ಚುನಾವಣೆ 2024ರ ಕಾಸರಗೋಡು ಲೋಕಸಭಾ ಕ್ಷೇತ್ರದಿಂದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಗಳಾಗಿ ಎಂ.ಎಲ್ ಅಶ್ವಿನಿ ಮತ್ತು ಎ. ವೇಲಾಯುಧನ್ ಗುರುವಾರ ನಾಮಪತ್ರ ಸಲ್ಲಿಸಿದರು.
ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಯಾಗಿರುವ ಕೆ. ಇನ್‍ಬಾಶೇಖರ್ ನಾಮಪತ್ರ ಸ್ವೀಕರಿಸಿದರು. ಎಂ.ಎಲ್.ಅಶ್ವಿನಿ ಅವರು ಮೂರು ಸೆಟ್ ನಾಮಪತ್ರ ಸಲ್ಲಿಸಿದರು. ಇದೇ ಸಂದರ್ಭ ಬಿಜೆಪಿ ಕಾಸರಗೋಡು ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿ ಎ. ವಏಲಾಯುಧನ್ ಅವರೂ ನಾಮಪತ್ರ ಸಲ್ಲಿಸಿದರು.
ಅದ್ದೂರಿ ಮೆರವಣಿಗೆ:
ನಾಮಪತ್ರ ಸಲ್ಲಿಕೆಗೂ ಮೊದಲು ಪಕ್ಷದ ಮುಖಂಡರು ಹಾಗೂ ಕಾಯರ್ತಕರ್ತರನ್ನೊಳಗೊಂಡ ಭಾರೀ ಮೆರವಣಿಗೆ ನಡೆಯಿತು. ವಿದ್ಯಾನಗರದ ಬಿ.ಸಿ ರೋಡ್ ಜಂಕ್ಷನ್‍ನಿಂದ ಜಿಲ್ಲಾಧಿಕಾರಿ ಕಚೇರಿ ವಠಾರದ ವರೆಗೆ ಮೆರವಣಿಗೆ ಆಯೋಜಿಸಲಾಗಿತ್ತು. ಬಿಜೆಪಿ ಮುಖಂಡರಾದ ರವೀಶ ತಂತ್ರಿ ಕುಂಟಾರು, ಎಂ. ಸಂಜೀವ ಶೆಟ್ಟಿ, ವಕೀಲ ಎಂ. ನಾರಾಯಣ ಭಟ್, ಎ. ಸಂಪತ್, ವಿ. ರವೀಂದ್ರನ್, ಪಿ.ರಮೇಶ್, ಸವಿತಾ ಟೀಚರ್ ಮೊದಲಾದವರು ಉಪಸ್ಥಿತರಿದ್ದರು.