ಕಾಸರಗೋಡು: ಕೇರಳ ಸರ್ಕಾರದ ಎಲೆಕ್ಟ್ರಾನಿಕ್ಸ್ ಆಂಡ್ ಐಟಿ ಇಲಾಖೆಯಡಿಯಲ್ಲಿ ಕಾರ್ಯನಿರ್ವಹಿಸುವ ಸಿಡಿಟ್ ವತಿಯಿಂದ ಐದನೇ ತರಗತಿಯಿಂದ ಪ್ಲಸ್ ಟು ತರಗತಿ ವರೆಗಿನ ವಿದ್ಯಾರ್ಥಿಗಳಿಗೆ ರಜಾದಿನ ಕಂಪ್ಯೂಟರ್ ತರಬೇತಿಯನ್ನು ನೀಡಲಾಗುತ್ತದೆ.
ಪೈಥಾನ್, ಪಿಎಚ್‍ಪಿ, ಜಾವಾ, ಸಿ++ ಎಂಬೀ ಪೆÇ್ರೀಗ್ರಾಮಿಂಗ್ ಭಾಷೆಗಳು, ಗ್ರಾಫಿಕ್ ಡಿಸೈನಿಂಗ್, ವೆಬ್ ಡಿಸೈನಿಂಗ್, ಡೆಸ್ಕ್‍ಟಾಪ್ ಪಬ್ಲಿಷಿಂಗ್, ಅನಿಮೇಷನ್, ಆಫೀಸ್ ಆಟೊಮೇಷನ್, ಅಕೌಂಟಿಂಗ್, ಹಾರ್ಡ್‍ವೇರ್, ನೆಟ್‍ವಕಿರ್ಂಗ್, ರೊಬೊಟಿಕ್ಸ್ ವಿಡಿಯೋ ಸರ್ವೆಲೈನ್ಸ್ ಮುಂತಾದ 20 ಕ್ಕೂ ಹೆಚ್ಚು ಕೋರ್ಸ್‍ಗಳು, ವೈಬ್ರಂಟ್ ಐಡಿಯಲ್ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ಡೇಟಾ ಸೈನ್ಸ್, ಡಿಸೈನ್ ಥಿಂಕಿಂಗ್, ಆಗ್ಮೆಂಟೆಡ್ ವರ್ಚುವಲ್ ರಿಯಾಲಿಟಿ, ಡಿಜಿಟಲ್ ಮಾರ್ಕೆಟಿಂಗ್, ಸೋಶಿಯಲ್ ಮೀಡಿಯಾ ಎಥಿಕ್ಸ್, ಪಾಸ್ರ್ನಾಲಿಟಿ ಡೆವೆಲಪ್ಮೆಂಟ್ ಎಂಬಿವುಗಳಲ್ಲಿಯೂ ಮಕ್ಕಳಿಗೆ ತರಬೇತಿ ನೀಡಲಾಗುತ್ತದೆ.
ವಿವಿಧ ಸ್ಥಳೀಯಾಡಳಿತ ಸಂಸ್ಥೆಗಳ ವ್ಯಾಪ್ತಿಯಲ್ಲಿ ಸಿಡಿಟ್‍ನ ಅನುಮೋದಿತ ತರಬೇತಿ ಕೇಂದ್ರಗಳ ಮೂಲಕ ಮಕ್ಕಳಿಗೆ ಎರಡು ತಿಂಗಳ ತರಬೇತಿ ನೀಡಲಾಗುತ್ತದೆ. ತರಗತಿಗಳು ಏಪ್ರಿಲ್ 1 ರಂದು ಪ್ರಾರಂಭವಾಗಿ ಮೇ 31 ರಂದು ಮುಕ್ತಾಯಗೊಳ್ಳುತ್ತದೆ. ತರಬೇತಿಯಲ್ಲಿ ಭಾಗವಹಿಸುವ ಎಲ್ಲಾ ಮಕ್ಕಳಿಗೆ ಪಠ್ಯ ಪುಸ್ತಕ ಮತ್ತು ಶಾಲಾ ಬ್ಯಾಗ್ ಉಚಿತವಾಗಿ ನೀಡಲಾಗುವುದು. ತರಬೇತಿಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ವಿಶೇಷ ಪ್ರಶಸ್ತಿಗಳನ್ನು ನೀಡಲಾಗುವುದು. www.tet.cdit.org ಎಂಬ ಗೂಗಲ್ ಲಿಂಕ್ ಮೂಲಕ ರಿಜಿಸ್ಟ್ರೇಷನ್ ಮಾಡಬಹುದು. ಹೆಚ್ಚಿನ ಮಾಹಿತಿಗಾಗಿ ತಿತಿತಿ.ಣeಣ.ಛಿಜiಣ.oಡಿg ವೆಬ್ ಸೈಟ್ ಸಂದರ್ಶಿಸುವಂತೆ ಪ್ರಕಟಣೆ ತಿಳಿಸಿದೆ.