ಇಂದು ಸ್ಮಾರ್ಟ್‍ಪೋನ್‍ಗಳು ಕೇವಲ ಪೋನ್ ಕರೆ ಮಾಡುವ ಮಾತ್ರ ಸಾಧನವಲ್ಲ! ದೈನಂದಿನ ಜೀವನದ ಪ್ರತಿಯೊಂದು ಭಾಗವು ಮೊಬೈಲ್ ಪೋನ್‍ಗಳಲ್ಲಿ ಸಂಗ್ರಹವಾಗುತ್ತದೆ, ಪಾವತಿಗಳನ್ನು ಮಾಡುವುದು, ಮನರಂಜನೆಯನ್ನು ಆನಂದಿಸುವುದು, ಗೇಮಿಂಗ್, ದಾಖಲೆಗಳನ್ನು ಸುರಕ್ಷಿತವಾಗಿರಿಸುವುದು ಮತ್ತು ಅಧ್ಯಯನ ಮಾಡುವುದು ಇತ್ಯಾದಿ.
ಹಾಗಾದರೆ ಅಂತಹ ಪ್ರಮುಖ ಪೋನ್ ಹ್ಯಾಕ್ ಆಗಿದ್ದರೆ? ಅಲ್ಲದೆ, ಪೋನ್ ಈಗಾಗಲೇ ಹ್ಯಾಕರ್‍ನ ಕೈಗೆ ಬಿದ್ದಿದೆ ಎಂದು ನಿಮಗೆ ಹೇಗೆ ತಿಳಿಯುವುದು? ಚಿಂತಿಸಬೇಡಿ, ಇದನ್ನು ತಿಳಿಯಲು ತುಂಬಾ ಸರಳವಾದ ಮಾರ್ಗವಿದೆ…
ಪೋನ್ ಹ್ಯಾಕ್?
ನಿಮ್ಮ ಬ್ಯಾಂಕ್ ಖಾತೆ ಸಂಖ್ಯೆಯಂತಹ ಪ್ರಮುಖ ಮಾಹಿತಿಯನ್ನು ಸಂಗ್ರಹಿಸುವಂತೆಯೇ ಪೋನ್‍ನ ಸುರಕ್ಷತೆಯು ಮುಖ್ಯವಾಗಿದೆ. ರಾಷ್ಟ್ರೀಯ ಅಪರಾಧ ತನಿಖಾ ಬ್ಯೂರೋ (ಎನ್.ಸಿ.ಐ.ಬಿ.) ಪ್ರಕಾರ, ಪೋನ್ ಹ್ಯಾಕ್ ಆಗಿದ್ದರೆ ಪತ್ತೆ ಮಾಡಲು ಏಳು ಮಾರ್ಗಗಳಿವೆ. ಅದನ್ನು ಯುಎಸ್.ಎಸ್.ಡಿ. ಕೋಡ್‍ಗಳು ಇತ್ಯಾದಿಗಳನ್ನು ಬಳಸಿಕೊಂಡು ಇವುಗಳನ್ನು ಕಂಡುಹಿಡಿಯಬಹುದು.
ಪೋನ್ ಹ್ಯಾಕ್ ಅನ್ನು ಪತ್ತೆಹಚ್ಚುವುದು ಹೇಗೆ?:
ಪ್ರತಿಯೊಬ್ಬ ಸ್ಮಾರ್ಟ್‍ಪೋನ್ ಬಳಕೆದಾರರು ತಿಳಿದಿರಬೇಕಾದ ಏಳು ಕೋಡ್‍ಗಳು ಇಲ್ಲಿವೆ. ಭಾರತದಲ್ಲಿನ ಪ್ರತಿಯೊಬ್ಬ ಪೋನ್ ಬಳಕೆದಾರರು ತಿಳಿದಿರಲೇಬೇಕಾದ ಕೋಡ್‍ಗಳು ಇವು...
ಈ ವೈಶಿಷ್ಟ್ಯಗಳು ನಿಮಗೆ ಸ್ಕ್ಯಾಮ್ ಕರೆಗಳನ್ನು ಪತ್ತೆಹಚ್ಚಲು ಮತ್ತು ನಿಮ್ಮ ಅರಿವಿಲ್ಲದೆ ಹಿನ್ನೆಲೆಯಲ್ಲಿ ಯಾವುದೇ ಚಟುವಟಿಕೆ ನಡೆಯುತ್ತಿದೆಯೇ ಎಂದು ತಿಳಿಯಲು ಸಹಾಯ ಮಾಡುತ್ತದೆ.
ಯಾವ್ಯಾವುದು:
*#21#
ನಿಮ್ಮ ಪೋನ್ ಕರೆ ಅಥವಾ ಪೋನ್ ಸಂಖ್ಯೆಯನ್ನು ಬೇರೆ ಯಾವುದೇ ಸಂಖ್ಯೆಗೆ ಫಾರ್ವರ್ಡ್ ಮಾಡಲಾಗಿದೆಯೇ ಎಂದು ತಿಳಿಯಲು ಬಳಸಬೇಕಾದ ಕೋಡ್ ಇದು. ಕಾಲ್-ಫಾರ್ವರ್ಡ್ ಸ್ಕ್ಯಾಮ್‍ಗಳು ಇತ್ತೀಚೆಗೆ ವರದಿಯಾದ ಸೈಬರ್ ವಂಚನೆಯ ಪ್ರಮುಖ ಭಾಗವಾಗಿದೆ. ಹಾಗಾಗಿ ಪೋನ್ ಬಳಕೆದಾರರು ಇಂತಹ ಸಂದೇಹವನ್ನು ಎದುರಿಸಿದರೆ, ಅವರು ಈ ಸಂಖ್ಯೆಯನ್ನು ಡಯಲ್ ಮಾಡಿ ಮತ್ತು ಕರೆ ಫಾರ್ವರ್ಡ್ ಮಾಡಲಾಗಿದೆಯೇ ಎಂದು ಕಂಡುಹಿಡಿಯಬಹುದು.
*#06#
ಪೋನ್‍ನ ಐ.ಎಂ.ಇ.ಐ ಸಂಖ್ಯೆಯನ್ನು ತಿಳಿಯಲು ಇದು ಯು.ಎಸ್.ಎಸ್.ಡಿ ಕೋಡ್ ಆಗಿದೆ. ನಿಮ್ಮ ಸ್ಮಾರ್ಟ್‍ಪೋನ್ ಕಳೆದು ಹೋದರೆ ನೀವು ಪೋಲೀಸ್ ದೂರು ದಾಖಲಿಸಬಹುದು. ಇದಕ್ಕಾಗಿ ನೀವು *#06# ಅನ್ನು ಡಯಲ್ ಮಾಡಬಹುದು ಮತ್ತು ಪೋನ್ ಕೋಡ್ ಅನ್ನು ಕಂಡುಹಿಡಿಯಬಹುದು.
*#07#
ಪೋನ್‍ನ ಎಸ್.ಎ.ಆರ್ ಮೌಲ್ಯವನ್ನು ಕಂಡುಹಿಡಿಯಲು ಇದು ಯು.ಎಸ್.ಎಸ್.ಡಿ. ಕೋಡ್ ಆಗಿದೆ. ಪೋನ್‍ಗಳ ವ್ಯಾಪಕ ಬಳಕೆಯು ದೈಹಿಕ ಸಮಸ್ಯೆಗಳಿಗೆ ಕಾರಣವಾಗುತ್ತದೆ ಎಂದು ತಜ್ಞರು ಹೇಳುವುದನ್ನು ನೀವು ಕೇಳಿಲ್ಲವೇ? ಅಂತಹ ಸಂದರ್ಭಗಳಲ್ಲಿ, ಎಸ್.ಎ.ಆರ್. ನಮ್ಮ ಪೋನ್ ನ್ನಿಂದ ಹೊರಸೂಸುವ ವಿಕಿರಣದ ಬಗ್ಗೆ ತಿಳಿಯಲು ಸಹಾಯ ಮಾಡುತ್ತದೆ. ಪೋನ್ ಹೊರಸೂಸುವ ವಿಕಿರಣದ ಬಗ್ಗೆ ವಿವರವಾದ ಮಾಹಿತಿಯನ್ನು ಪಡೆಯಲು ಈ ಸಂಖ್ಯೆ ಬಳಸಿ ತಿಳಿಯಬಹುದು.
#0#
ಪೋನ್‍ನ ಆರೋಗ್ಯವನ್ನು ಪರೀಕ್ಷಿಸಲು ಇದು ಕೋಡ್ ಆಗಿದೆ. ಅಂದರೆ, ಪೋನ್‍ನ ಡಿಸ್ಪ್ಲೇ, ಸ್ಪೀಕರ್, ಕ್ಯಾಮೆರಾ ಮತ್ತು ಸೆನ್ಸಾರ್ ಸರಿಯಾಗಿ ಕಾರ್ಯನಿರ್ವಹಿಸುತ್ತಿದೆಯೇ ಎಂದು ಕಂಡುಹಿಡಿಯಲು #0# ಕೋಡ್ ಅನ್ನು ಡಯಲ್ ಮಾಡಿ.
4636
ಮೊದಲೇ ಹೇಳಿದಂತೆ ಪೋನ್‍ನ ಕಾರ್ಯಗಳನ್ನು ವಿವರವಾಗಿ ಅರ್ಥಮಾಡಿಕೊಳ್ಳಲು ಮತ್ತೊಂದು ಆಯ್ಕೆ ಇದೆ. ಈ ಕೋಡ್ ಫೆÇೀನ್‍ನ ಬ್ಯಾಟರಿ, ಇಂಟರ್ನೆಟ್ ಮತ್ತು ವೈ-ಫೈ ಕುರಿತು ಗ್ರ್ಯಾನ್ಯುಲರ್ ಮಾಹಿತಿಯನ್ನು ನಿಮಗೆ ತಿಳಿಸುತ್ತದೆ.