ನವದೆಹಲಿ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ (ನರೇಗಾ) ಕೂಲಿ ದರದಲ್ಲಿ ಹೆಚ್ಚಳವನ್ನು 'ಕೃಷಿ ಕಾರ್ಮಿಕರಿಗೆ ಸಂಬಂಧಿಸಿದ' ಗ್ರಾಹಕರ ಬೆಲೆ ಸೂಚ್ಯಂಕದ (ಸಿಪಿಐ-ಎಎಲ್) ಆಧಾರದಲ್ಲಿ ಲೆಕ್ಕ ಹಾಕಲಾಗುತ್ತದೆ ಎಂದು ಕೇಂದ್ರ ಸರ್ಕಾರ ಶುಕ್ರವಾರ ತಿಳಿಸಿದೆ.

ಕಳೆದ ವರ್ಷದಿಂದ ಗ್ರಾಹಕರ ಬೆಲೆ ಸೂಚ್ಯಂಕದಲ್ಲಿ ಶೇ 7.7ರಷ್ಟು ಹೆಚ್ಚಳ ಕಂಡುಬಂದಿದೆ.
ನರೇಗಾ ಕೂಲಿ ದರದಲ್ಲಿ ಅಲ್ಪ ಹೆಚ್ಚಳ ಮಾಡಲಾಗಿದೆ ಎಂಬ ಟೀಕೆಗಳು ಕೇಳಿಬಂದ ಹಿನ್ನೆಲೆಯಲ್ಲಿ ಗ್ರಾಮೀಣಾಭಿವೃದ್ಧಿ ಸಚಿವಾಲಯ ಈ ಸ್ಪಷ್ಟನೆ ನೀಡಿದೆ.
ವಿವಿಧ ರಾಜ್ಯಗಳಿಗೆ ಅನ್ವಯವಾಗುವಂತೆ ನರೇಗಾ ಕೂಲಿ ದರದಲ್ಲಿ ಶೇ 4ರಿಂದ 10ರಷ್ಟು ಹೆಚ್ಚಳ ಮಾಡಿ, ಸಚಿವಾಲಯ ಬುಧವಾರ ಅಧಿಸೂಚನೆ ಪ್ರಕಟಿಸಿತ್ತು. ದರದಲ್ಲಿನ ರಾಷ್ಟ್ರೀಯ ಸರಾಸರಿ ಹೆಚ್ಚಳ ಶೇ 7ರಷ್ಟಿದೆ.
ಹಣದುಬ್ಬರದಿಂದ ಕೃಷಿ ಕೂಲಿಕಾರ್ಮಿಕರ ಮೇಲಾಗುವ ಹೊರೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಕೇಂದ್ರ ಸರ್ಕಾರವು ಸಿಪಿಐ-ಎಲ್ ಆಧಾರದಲ್ಲಿ ಕೂಲಿ ದರ ಪರಿಷ್ಕರಣೆಯನ್ನು ನಿರ್ಧರಿಸುತ್ತದೆ ಎಂದು ಸಚಿವಾಲಯದ ಮೂಲಗಳು ಹೇಳಿವೆ.