ತಿರುವನಂತಪುರಂ: ಎಸ್‍ಎಫ್‍ಐ ಕಾರ್ಯಕರ್ತರಿಂದ ಹತ್ಯೆಗೀಡಾದ ಸಿದ್ಧಾರ್ಥ್‍ಗೆ ನ್ಯಾಯ ದೊರಕಿಸಲು ಸಮಗ್ರ ತನಿಖೆಗೆ ಆಗ್ರಹಿಸಿ ಬಿಜೆಪಿ ಮತ್ತು ಎಬಿವಿಪಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಮೊರೆ ಹೋಗಿವೆ.
ಬಿಜೆಪಿ ವಕ್ತಾರ ಸಂದೀಪ್ ವಾಚಸ್ಪತಿ ಮತ್ತು ಎಬಿವಿಪಿ ರಾಜ್ಯ ಕಾರ್ಯದರ್ಶಿ ಇಯು ಈಶ್ವರಪ್ರಸಾದ್ ಅವರು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ನ್ಯಾಯಮೂರ್ತಿ ಅರುಣ್ ಕುಮಾರ್ ಮಿಶ್ರಾ ಅವರಿಗೆ ಮನವಿ ಸಲ್ಲಿಸಿದರು.
ವಿದ್ಯಾಭ್ಯಾಸದಲ್ಲಿ ಉತ್ಕøಷ್ಟತೆ ಮೆರೆದ ಯುವ ವಿದ್ಯಾರ್ಥಿಯೊಬ್ಬನ ಘೋರವಾದ ರೀತಿ ಕೊಲ್ಲಲ್ಪಟ್ಟಿರುವುದು ನಮ್ಮ ದೇಶದ ಸಾಮೂಹಿಕ ಆತ್ಮಸಾಕ್ಷಿಗೆ ಸರಿಪಡಿಸಲಾಗದ ಕಳಂಕವನ್ನುಂಟು ಮಾಡಿದೆ ಎಂದು ಸಂದೀಪ್ ಮನವಿಯಲ್ಲಿ ತಿಳಿಸಿದ್ದಾರೆ. ಇದನ್ನು ಬಗೆಹರಿಸಿ ಸಂತ್ರಸ್ತ ಕುಟುಂಬಕ್ಕೆ ನ್ಯಾಯ ಒದಗಿಸಿ ಭವಿಷ್ಯದಲ್ಲಿ ಇಂತಹ ಘಟನೆಗಳು ನಡೆಯದಂತೆ ತಡೆಯಲು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ತನಿಖೆ ನಡೆಸಿ ತಪ್ಪಿತಸ್ತ ವಿದ್ಯಾರ್ಥಿಗಳ ವಿರುದ್ಧ ಕ್ರಮ ಕೈಗೊಳ್ಳುವ ಅಗತ್ಯವಿದೆ. ಕಾಲೇಜಿನ ಡೀನ್, ಸಹಾಯಕ ವಾರ್ಡನ್ ಮತ್ತು ಇತರ ಸಿಬ್ಬಂದಿ ಈಗಾಗಲೇ ಎಫ್‍ಐಆರ್‍ನಲ್ಲಿ ಆರೋಪಿಯಾಗಿದ್ದಾರೆ.
ಪಕ್ಷ ರಾಜಕೀಯ, ಸ್ವಜನಪಕ್ಷಪಾತದ ಹೊರತಾಗಿ ತಪ್ಪಿತಸ್ಥರ ವಿರುದ್ಧ ಸೂಕ್ತ ಮತ್ತು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಎಬಿವಿಪಿ ಮನವಿಯಲ್ಲಿ ಆಗ್ರಹಿಸಿದೆ.
ಸಾವಿನ ನಂತರವೂ ಅಧಿಕಾರಿಗಳು ಸಿದ್ಧಾರ್ಥ್ ವಿರುದ್ಧ ಸುಳ್ಳು ದೂರು ನೀಡಿದ ಕ್ರಿಮಿನಲ್‍ಗಳ ಜೊತೆಗಿದ್ದಾರೆ.ಎಲ್ಲಾ ಘಟನೆಗಳನ್ನು ಮೌನವಾಗಿ ಬೆಂಬಲಿಸಿದ ಡೀನ್ ವಿರುದ್ಧ ಕೇರಳ ಪೋಲೀಸರು ಇನ್ನೂ ಕೇಸ್ ಶೀಟ್ ದಾಖಲಿಸಿಲ್ಲ. ಈ ಸಂದರ್ಭದಲ್ಲಿ ಎಬಿವಿಪಿ ಮಧ್ಯ ಪ್ರವೇಶಿಸಿ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಬೇಕು ಎಂದು ಮನವಿ ಮಾಡಿದೆ.