ಕಾಸರಗೋಡು: ರಾಜ್ಯದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ರಾಜ್ಯ ನೌಕರರು ಮತ್ತು ಶಿಕ್ಷಕರ ವೇತನ ಸ್ಥಗಿತಗೊಳಿಸಿರುವುದನ್ನು ವಿರೋಧಿಸಿ ಕೆಪಿಎಸ್‍ಟಿಎ ವತಿಯಿಂದ ಜಿಲ್ಲಾ ಖಜಾನೆ ಎದುರು ಪ್ರತಿಭಟನಾ ಧರಣಿ ನಡೆಸಿತು. ಡಿಸಿಸಿ ಅಧ್ಯಕ್ಷ ಪಿ.ಕೆ. ಫೈಸಲ್ ಧರಣಿ ಉದ್ಘಾಟಿಸಿದರು.
ಈ ಸಂದರ್ಭ ಮಾತನಾಡಿದ ಅವರು, ರಾಜ್ಯವನ್ನು ಆರ್ಥಿಕ ದೀವಾಳಿಯತ್ತ ಕೊಂಡೊಯ್ದಿರುವ ಎಡರಂಗದ ಪಿಣರಾಯಿ ವಿಜಯನ್ ನೇತೃತ್ವದ ಆಡಳಿತ ಪ್ರಸಕ್ತ ನೌಕರರ ವೇತನವನ್ನೂ ಸಕಾಲಕ್ಕೆ ನೀಡಲಾಗದೆ ಜನರನ್ನು ಸಂಕಷ್ಟಕ್ಕೆ ತಳ್ಳಿರುವುದಾಗಿ ತಿಳಿಸಿದರು. ಸಂಘಟನೆ ಅಧ್ಯಕ್ಷ ಕೆ.ವಿ. ವಾಸುದೇವನ್ ನಂಬೂತಿರಿ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಕಾರ್ಯದರ್ಶಿ ಜಿ.ಕೆ.ಗಿರೀಶ್, ಕಾರ್ಯಕಾರಿ ಸಮಿತಿ ಸದಸ್ಯರಾದ ಪಿ.ಶಶಿಧರನ್, ಕೆ. ಅನಿಲ್ ಕುಮಾರ್, ಕೆ. ಶ್ರೀನಿವಾಸನ್, ಸ್ವಪ್ನಾ ಜಾರ್ಜ್, ಟಿ. ರಾಜೇಶ್ ಕುಮಾರ್, ಕೆ. ಗೋಪಾಲಕೃಷ್ಣನ್, ಬಿಜು ಆಗಸ್ಟಿನ್, ಎಂ.ಕೆ. ಪ್ರಿಯಾ, ಕೆ.ಸಂಧ್ಯಾ, ನಿಕೇಶ್ ಮಾಡಾಯಿ, ವಿಮಲ್ ಅಡಿಯೋಡಿ, ಕೆ. ಎ ಜಾನ್, ಸಂತೋಷ್ ಕುಮಾರ್ ಕ್ರಾಸ್ತಾ, ಕೆ.ವಿ. ನಿಶಿತಾ, ಅನಿಲ್ ನೀಲಾಂಬರಿ, ಓ.ಎಂ. ರಶೀದ್, ಟಿ.ಜಿ.ದೇವಸ್ಯ, ಹರೀಶ್ ಪೇರಾಲ್, ಶೈಮಾ ಪರಂಬತ್, ಎಸ್. ಆಗಸ್ಟಿನ್ ಉಪಸ್ಥಿತರಿದ್ದರು. ಸಂಘಟನೆ ಕಂದಾಯ ಜಿಲ್ಲಾ ಕಾರ್ಯದರ್ಶಿ ಪಿ.ಟಿ.ಬೆನ್ನಿ ಸ್ವಾಗತಿಸಿದರು.