ಬದಿಯಡ್ಕ: ನೀರ್ಚಾಲು ಕಾನತ್ತಿಲ ಶ್ರೀ ಧೂಮಾವತೀ ದೈವಸ್ಥಾನ ನವೀಕರಣ ಪ್ರತಿಷ್ಠಾ ಮಹೋತ್ಸವ ಮತ್ತು ಧರ್ಮನೇಮೋತ್ಸವ ಮಾ.27 ರಿಂದ 29 ರ ವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಲಿದೆ.
ಮಾ.27 ರಂದು ಸಂಜೆ 6.30ರಿಂದ ಪುಣ್ಯಾಹ ವಾಚನ, ದೇವತಾ ಪ್ರಾರ್ಥನೆ, ಆಚಾರ್ಯ ಋತ್ವಿಗರಣ, ರಾಕ್ಷೋಘ್ನ ಹವನ, ವಾಸ್ತು ಹವನ, ವಾಸ್ತು ಬಲಿ, ವಾಸ್ತು ಪುಣ್ಯಾಹ, 28 ರಂದು ಬೆಳಗ್ಗೆ 7.30 ರಿಂದ ಶ್ರೀ ಮಹಾಗಣಪತಿ ಹವನ, ಕಲಶ ಪೂಜೆ, ಪ್ರಾಸಾದ ಪ್ರತಿಷ್ಠೆ, ಮುಹೂರ್ತ ದಾನ, ಶ್ರೀ ಧೂಮಾವತಿ ದೈವದ ದಾರು ಪ್ರತಿಷ್ಠೆ, ಕಲಶಾಭಿಷೇಕ, ದೈವಗಳ ತಂಬಿಲ, ನಿತ್ಯ ನೈಮಿತ್ತಿಕಾದಿಗಳ ನಿರ್ಣಯ, ಮಂತ್ರಾಕ್ಷತೆ, ಪ್ರಸಾದ ವಿತರಣೆ, ರಾತ್ರಿ 8 ರಿಂದ ಶ್ರೀ ದುರ್ಗಾಪೂಜೆ, ಮಂಗಳಾರತಿ, ಪ್ರಸಾದ ವಿತರಣೆ, ತೊಡಂಙಲು, ಅನ್ನ ಸಂತರ್ಪಣೆ ನಡೆಯಲಿದೆ.
ಮಾ.29 ರಂದು ಶ್ರೀ ಧೂಮಾವತಿ ದೈವದ ನೃತ್ಯ, ಅರಶಿನ ಹುಡಿ ಪ್ರಸಾದ ವಿತರಣೆ ನಡೆಯಲಿದೆ.